ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪಕ್ಷೇತರ ಅಭ್ಯರ್ಥಿ 'ಕೈ'ಗೆ ಸೇರ್ಪಡೆ: ಪುರಸಭೆ ಅಧ್ಯಕ್ಷ ಸ್ಥಾನ ಯಾರ ಪಾಲಿಗೆ?

ವರದಿ: ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್, ಅಣ್ಣಿಗೇರಿ

ಅಣ್ಣಿಗೇರಿ : ಅಣ್ಣಿಗೇರಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 12 ಸ್ಥಾನಗಳನ್ನು ಗಳಿಸಿ ಬಹುಮತದ ಸನಿಹಕ್ಕೆ ಬಂದಿತ್ತು. ಆದರೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಗುರುವಾರ ಸಂಜೆ ಪಟ್ಟಣದಲ್ಲಿ ವಾರ್ಡ್ ನಂಬರ್ 1 ನೇ ಪಕ್ಷೇತರ ಅಭ್ಯರ್ಥಿಯಾದ ನಾಗರಾಜ್ ದಳವಾಯಿ ಅವರನ್ನು ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಸಾಧಿಸಿದೆ.

ಆದರೆ ಸ್ಪಷ್ಟ ಬಹುಮತ ಸಿಕ್ಕರೂ ಅಧಿಕಾರ ಹಿಡಿಯಲು ಕಾಂಗ್ರೆಸ್‌ಗೆ ಮತ್ತೊಂದು ತೊಡಕು ಎದುರಾಗಿದೆ. ಅದ್ಯಕ್ಷ ಸ್ಥಾನಕ್ಕೆ ಗೆಲ್ಲಬೇಕಿದ್ದ ಮೀಸಲು ಸ್ಥಾನದಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಈ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಚುನಾಯಿತರಾಗಿದ್ದಾರೆ. ಹೀಗಾಗಿ ಅಣ್ಣಿಗೇರಿ ಪುರಸಭೆಯ ನೂತನ ಅಧ್ಯಕ್ಷ ಯಾರಾಗ್ತಾರೆ ಅನ್ನೋದು ಪಟ್ಟಣದ ಜನರಲ್ಲಿ ಕುತೂಹಲ ಕೆರಳಿಸಿದೆ. ಇನ್ನು ಚುನಾವಣೆಯಲ್ಲಿ ಜೋಡೆತ್ತಿನಂತೆ ದುಡಿದ ಮಾಜಿ ಶಾಸಕ ಕೋನರೆಡ್ಡಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್ ಅಸೂಟಿ ಅಧ್ಯಕ್ಷ ಸ್ಥಾನಕ್ಕಾಗಿ ಏನಾದ್ರೂ ರಣತಂತ್ರ ಹೂಡ್ತಾರಾ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಸದ್ಯ ಸ್ಪಷ್ಟ ಬಹುಮತ ಸಿಕ್ಕರೂ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಹಿನ್ನೆಲೆ ಕಾಂಗ್ರೆಸ್‌ಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

Edited By : Nagesh Gaonkar
Kshetra Samachara

Kshetra Samachara

31/12/2021 05:36 pm

Cinque Terre

70.28 K

Cinque Terre

6

ಸಂಬಂಧಿತ ಸುದ್ದಿ