ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 'ಕೈ' ಕೊಟ್ಟು 'ಕಮಲ' ಮುಡಿದ ಕಾರ್ಯಕರ್ತರು

ಧಾರವಾಡ: ಧಾರವಾಡ ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೂರಾರು ಜನ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಯಲ್ಲಪ್ಪ ಬಾಗೋಡಿ, ಕೇದಾರಪ್ಪ ಕಾಳಿಕೆದಾರಿ, ಬಸು ರತ್ನಪ್ಪನವರ್, ರುದ್ರಪ್ಪ ಮಾಧನಬಾವಿ, ಮಾರುತಿ ಹಾದಿಮನಿ, ಶಿವಪ್ಪ ಗುಗೆನ್ನವರ, ಬಸವರಾಜ ಗೋಕಾವಿ, ರಮೇಶ್ ಬಾಗೋಡಿ, ಈರಪ್ಪ ಬಳಿಗಾರ್, ಶಿವಾನಂದ ತಿಮ್ಮಾಪುರ್, ಪ್ರವೀಣ್ ಪಟ್ಟಣಶೆಟ್ಟಿ, ಸದಾನಂದ ಗಳಗಿ, ಮಹಾದೇವಪ್ಪ ಬಾಗೋಡಿ, ಸುರೇಶ್ ಬಾಗೋಡಿ ಸೇರಿದಂತೆ ನೂರಾರು ಜನ ಕಾಂಗ್ರೆಸ್ ಪಕ್ಷ ತೊರೆದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಕಾರ್ಯಕರ್ತರನ್ನು ಬಿಜೆಪಿ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡ ಶಾಸಕ ಅಮೃತ ದೇಸಾಯಿ ಅವರು, ದೇಶದ ಅಭಿವೃದ್ಧಿ, ರಾಷ್ಟ್ರದ ಏಕತೆ ಹಾಗೂ ಹಿಂದೂ ಧರ್ಮಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಪ್ರಶ್ನಾತೀತ ನಾಯಕರಾಗಿದ್ದಾರೆ. ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ಕೊಟ್ಟ ಮಾತಿನಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ. ತ್ರಿವಳಿ ತಲಾಕ್ ನಿಷೇಧ ಹಾಗೂ ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ಹಿಂದುಗಳ ರಕ್ಷಣೆಗೆ ನಿಂತ ಮಹಾನ್ ನಾಯಕರಾಗಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಅವರ ಜನಪರ ಯೋಜನೆ ಮತ್ತು ಮಹತ್ವದ ನಿರ್ಣಯಗಳನ್ನು ದೇಶದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸೋಣ. ಬಿಜೆಪಿ ಸಾಮಾನ್ಯರ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ ಕುಟುಂಬದ ರಾಜಕಾರಣವೇ ಪ್ರಧಾನವಾಗಿದೆ. ಅಲ್ಲಿ ಡಿಕೆಶಿ, ಸಿದ್ದರಾಮಯ್ಯ ಹಾಗೂ ಇತರ ನಾಯಕರ ಮಾತಿಗೆ ಯಾವುದೇ ಬೆಲೆ ಇಲ್ಲ. ಆದರೆ ಬಿಜೆಪಿ ಸಾಮಾನ್ಯ ಹಾಗೂ ನಿಷ್ಠಾವಂತ ಕಾರ್ಯಕರ್ತರ ಪಕ್ಷವಾಗಿದ್ದು, ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತನೂ ನಾಯಕನಿದ್ದಂತೆ ಎಂದರು.

Edited By : Nagesh Gaonkar
Kshetra Samachara

Kshetra Samachara

30/12/2021 10:33 pm

Cinque Terre

75.71 K

Cinque Terre

12

ಸಂಬಂಧಿತ ಸುದ್ದಿ