ಗದಗ: ಮುದ್ರಣಕಾಶಿ ಗದಗ-ಬೆಟಗೇರಿಯ ನಗರಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಅಧಿಕಾರವನ್ನು ಕಮಲ ಪಡೆಯು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಗದಗ-ಬೆಟಗೇರಿಯ ನಗರಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು, ಭಾರತೀಯ ಜನತಾ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿದೆ.
35 ವಾರ್ಡಗಳಲ್ಲಿ ಮ್ಯಾಜಿಕ್ ನಂಬರ್ 18 ತಲುಪಿದ ಬಿಜೆಪಿ ಸ್ಪಷ್ಟ ಬಹುಮತದ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ. ಇನ್ನೂ 35 ವಾರ್ಡ್ ಗಳಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 18, ಪಕ್ಷೇತರ 2 ವಾರ್ಡ್ ಗಳಲ್ಲಿ ಜಯಶಾಲಿಯಾಗಿದ್ದಾರೆ.
ಕಳೆದ ಬಾರಿ 23 ಸಂಖ್ಯಾ ಬಲದೊಂದಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು, ಪ್ರಯಾಸದ ಮೂಲಕ ಈ ಬಾರಿಗೆ ನಗರಸಭೆ ಬಿಜೆಪಿ ತೆಕ್ಕೆ ಸೇರಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/12/2021 01:49 pm