ಹುಬ್ಬಳ್ಳಿ: ಹುಬ್ಬಳ್ಳಿಯ ಬಿಜೆಪಿ ಕಾರ್ಯಕಾರಣಿ ಸಭೆಯ ನಂತರ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಉತ್ತರ ಕರ್ನಾಟಕ ಭಾಗದವರೇ ಮುಖ್ಯಮಂತ್ರಿ, ಸ್ಪೀಕರ್, ಹಾಗೂ ಸಚಿವರಾಗಿಯೂ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಬೇಕು.ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಬೇಕಿದೆ ಎಂದಿದ್ದಾರೆ.
ಉತ್ತರ ಕರ್ನಾಟಕದ ಬಗ್ಗೆ ನನ್ನದೇ ಆದ ವಿಭಿನ್ನ ಅಭಿವೃದ್ಧಿ ವಿಚಾರಧಾರೆಗಳನ್ನು ಹೊಂದಿದ್ದೇನೆ. ಮಂತ್ರಿ ಸ್ಥಾನ ಕೊಟ್ಟರೆ ಅದೆಲ್ಲವನ್ನೂ ಸಾಕಾರಗೊಳಿಸುತ್ತೇನೆ. ನನಗೆ ಯಾವುದೇ ಅಧಿಕಾರ ಆಸೆ ಇಲ್ಲ. ಸಿಎಂ ಆಗಬೇಕೆಂಬ ಆಸೆಯೂ ಇಲ್ಲ. ಒಂದು ವೇಳೆ ಸಿಎಂ ಹುದ್ದೆ ನೀಡಿದ್ದಲ್ಲಿ ಎಲ್ಲ ದಾಖಲೆ ಮುರಿದುಬಿಡ್ತೀನಿ ಎಂದು ಯತ್ನಾಳ್ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/12/2021 06:48 pm