ಕುಂದಗೋಳ : ಕಳೆದ ಡಿಸೆಂಬರ್ 27 ರಂದು ಮತದಾನ ನಡೆದ ಪಶುಪತಿಹಾಳ, ಮಳಲಿ, ಯಲಿವಾಳ, ಗೌಡಗೇರಿ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆಯ ಕಾರ್ಯ ನಾಳೆ ಬೆಳಿಗ್ಗೆ 8 ಗಂಟೆಗೆ ಕುಂದಗೋಳ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಪಶುಪತಿಹಾಳ ಗ್ರಾಮ ಪಂಚಾಯಿತಿ 9 ಸ್ಥಾನ, ಮಳಲಿ 11 ಸ್ಥಾನ ಸೇರಿದಂತೆ ಯಲಿವಾಳ ಗೌಡಗೇರಿ ತಲಾ ಒಂದೊಂದು ಸ್ಥಾನಗಳ 9 ಮತಗಟ್ಟೆಗಳ ಮತ ಎಣಿಕೆ ಕಾರ್ಯವನ್ನು 3 ಟೇಬಲ್'ನಲ್ಲಿ 9 ಜನ ಮತ ಎಣಿಕೆ ಸಿಬ್ಬಂದಿಗಳು 3 ಸುತ್ತಿನಲ್ಲಿ ಮತ ಎಣಿಕೆಯ ಕಾರ್ಯ ಕೈಗೊಳ್ಳಲಿದ್ದಾರೆ.
ಈಗಾಗಲೇ ನಾಳೆ ಮತ ಎಣಿಕೆ ಕಾರ್ಯ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ ಕಚೇರಿ ಸುತ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಚುನಾವಣೆಯಲ್ಲಿ ಗೆದ್ದವರ ವಿಜಯೋತ್ಸವಕ್ಕೆ ನಿಷೇಧ ಹೇರಲಾಗಿದ್ದು, ಮತ ಎಣಿಕೆಯ ಕೊಠಡಿ ಒಳಗೆ ಅಭ್ಯರ್ಥಿ ಇಲ್ಲವೇ ಆತನ ಸೂಚಕನಿಗೆ ಮಾತ್ರ ಕೋವಿಡ್ ಮಾರ್ಗಸೂಚಿ ಪ್ರಕಾರ ಅವಕಾಶ ಕಲ್ಪಿಸಲಾಗಿದೆ.
ಇನ್ನೂ ಪಶುಪತಿಹಾಳ, ಮಳಲಿ ಗ್ರಾಪಂ ಚುನಾವಣೆ ಬಹು ಕುತೂಹಲ ಮೂಡಿಸಿದ್ದು ನಾಳೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
29/12/2021 02:46 pm