ಅಣ್ಣಿಗೇರಿ :ಪಟ್ಟಣದ ಪುರಸಭೆ ಚುನಾವಣೆಯ ಮತದಾನ ಬೆಳಿಗ್ಗೆ 7 ಗಂಟೆಯಿಂದಲೇ ಪ್ರಾರಂಭವಾಗಿದ್ದು, ಪಟ್ಟಣದ ಮತ ಕೇಂದ್ರಗಳಲ್ಲಿ ಈಗಾಗಲೇ ಮತದಾನ ಬಹಳ ಚುರುಕುಗೊಂಡಿದೆ.
ಈಗಾಗಲೇ ಪಟ್ಟಣದ 14, ಮತ ಕೇಂದ್ರದಲ್ಲಿ ಒಟ್ಟು 1012 ಮತದಾರರು ಇದ್ದು, ಅದರಲ್ಲಿ ಗಂಡು 201, ಹೆಣ್ಣು 244 ಮತ ಚಲಾಯಿಸಿರುತ್ತಾರೆ. 16ನೇ ಮತ ಕೇಂದ್ರದಲ್ಲಿ ಒಟ್ಟು 818 ಮತಗಳು ಇದ್ದು, ಗಂಡು 125, ಹೆಣ್ಣು 150 ಮತಗಳು ಚಲಾವಣೆ ಯಾಗಿರುತ್ತದೆ. 17ನೆಯ ಮತ ಕೇಂದ್ರದಲ್ಲಿ ಒಟ್ಟು 1145 ಮತ ಗಳಿದ್ದು, ಗಂಡು 240, ಹೆಣ್ಣು197ಮತಗಳು ಚಲಾವಣೆಯಾಗುತ್ತಿದೆ. 18ನೇ ಮತ್ತು ಕೇಂದ್ರದಲ್ಲಿ ಒಟ್ಟು 608 ಮತಗಳು ಇದ್ದು, ಗಂಡು 117, ಹೆಣ್ಣು187 ಮತಗಳು ಚಲಾವಣೆ ಯಾಗಿರುತ್ತದೆ. 19ನೇ ಮತ ಕೇಂದ್ರದಲ್ಲಿ ಒಟ್ಟು 888 ಮತಗಳು ಇದ್ದು, ಗಂಡು 163, ಹೆಣ್ಣು 187 ಮತಗಳು ಚಲಾವಣೆ ಯಾಗಿರುತ್ತದೆ ಎಂದು ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ತಿಳಿಸಿರುತ್ತಾರೆ.
ಇದರ ಜೊತೆಗೆ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.ಸಾಯಂಕಾಲ 5:00 ವರೆಗೆ ಕಾಲಾವಕಾಶ ಇದ್ದು ಮತದಾರರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಕಾಣುತ್ತಿದೆ.
Kshetra Samachara
27/12/2021 12:47 pm