ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆ

ಕಲಘಟಗಿ:ಪಟ್ಟಣದ ಹನ್ನೆರಡು ಮಠದ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರ ಆಯ್ಕೆ ಮಾಡುವ ಕುರಿತು ಜಿಲ್ಲಾಧ್ಯಕ್ಷರಾದ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.

ಈ ಸಭೆಯಲ್ಲಿ ನೂರಾರು ಮುಖಂಡರು ಸೇರಿಕೊಂಡು ಚರ್ಚಿಸಿ , ತಾಲೂಕು ಅಧ್ಯಕ್ಷರ ನೇಮಕಕ್ಕೆ ಐವರು ಮುಖಂಡರಾದ ರಮೇಶ ಸೋಲಾರಗೊಪ್ಪ, ಮಲ್ಲಿಕಾರ್ಜುನ ಪುರದಗೌಡ್ರ, ವೈ. ಜಿ ಭಗವತಿ, ಪರಮಾನಂದ ಒಡೆಯರ ಹೆಸರುಗಳನ್ನ ಜಿಲ್ಲಾಧ್ಯಕ್ಷರಿಗೆ ಸೂಚಿಸಿದ್ದಾರೆ.

ಇದರಲ್ಲಿ ಒಬ್ಬರನ್ನ ಚುನಾವಣೆ ಮೂಲಕ ಆಯ್ಕೆ ಮಾಡಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿ, ನಿಮ್ಮೆಲ್ಲರ ಸಲಹೆ-ಸೂಚನೆ ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಸೂಕ್ತ ಚುನಾವಣೆ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.

Edited By :
Kshetra Samachara

Kshetra Samachara

25/12/2021 03:29 pm

Cinque Terre

10.81 K

Cinque Terre

0

ಸಂಬಂಧಿತ ಸುದ್ದಿ