ಕುಂದಗೋಳ: ಕರ್ನಾಟಕ ರಾಜ್ಯದ ನಾಡಧ್ವಜ ಸುಟ್ಟಂತಹ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಮೇಲೆ ನಾಡದ್ರೋಹ ಪ್ರಕರಣ ದಾಖಲಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕನ್ನಡಪರ ಸಂಘಟನೆಗಳ ಮೇಲೆ ಹಾಕಿರುವ ಪ್ರಕರಣ ಮರಳಿ ಪಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕುಂದಗೋಳ ಪಟ್ಟಣದ ಬಸ್ ನಿಲ್ದಾಣದ ಬಳಿ ಎಂಎಂಎಸ್ ಶಿವಸೇನೆ ಬೋರ್ಡ್ ಸುಟ್ಟು ಹಾಕಿ ಟಯರ್'ಗೆ ಬೆಂಕಿ ಹಚ್ಚಿದ ಅವರು ರಾಜ್ಯ ಸರ್ಕಾರ ನಾಡಧ್ವಜ ಸುಟ್ಟಂತಹ ವಿಚಾರದಲ್ಲಿ ಮೌನ ತಾಳದೇ ನಾಡದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯ ಮಾಡಿದರು.
ಬೆಳಗಾವಿ ಎಂಇಎಸ್ ಸಂಘಟನೆಯವರ ಅಪ್ಪನ ಆಸ್ತಿಯಲ್ಲಾ, ಸರ್ಕಾರ ಈ ಹೋರಾಟ ಉಗ್ರ ಸ್ವರೂಪ ಪಡೆಯುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು.
Kshetra Samachara
16/12/2021 01:09 pm