ಹುಬ್ಬಳ್ಳಿ: ಈಗಾಗಲೇ ಮಹಾದಾಯಿ ವಿಚಾರ ನ್ಯಾಯಾಲಯದಲ್ಲಿದೆ. ನಮ್ಮ ರಾಜ್ಯ ಹಾಗೂ ಗೋವಾ ಸರ್ಕಾರ ಪ್ರಶ್ನೆ ಮಾಡಿವೆ. ರಾಜ್ಯದಿಂದ ಮಹದಾಯಿಗಾಗಿ ಎಲ್ಲ ಸಿದ್ದತೆಗಳನ್ನು ನಡೆಸಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವಾಗಿರುವ ತೊಂದರೆಗಳನ್ನು ನಿವಾರಿಸುವ ಗಂಭೀರ ಚಿಂತನೆಗಳು ನಡೆದಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿ ಕುರಿತಂತೆ ಸ್ಥಳೀಯ ವಿಕೋಪ ಎಂದು ಪರಿಗಣಿಸಿ ಪ್ರಧಾನಮಂತ್ರಿ ಭೀಮಾ ಯೋಜನೆಯಡಿಯಲ್ಲಿ ಪರಿಹಾರ ಕಲ್ಪಿಸಲಾಗಿದೆ. ಕಳೆದ ಬಾರಿಯೂ ಸಮಸ್ಯೆಗೆ ಪರಿಹಾರ ದೊರಕಿಸಿದೆ ಎಂದು ತಿಳಿಸಿದರು.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಕುರಿತಂತೆ ನ್ಯಾಯಾಲಯ ಮರು ಪರಿಶೀಲನೆ ಮಾಡಬೇಕೆಂದು ಹೇಳಿದ್ದು, ದೌರ್ಭಾಗ್ಯವೆಂದರೆ ಪರಿಸರದ ಹೆಸರಿನಲ್ಲಿ ಅಭಿವೃದ್ಧಿಗೆ ವಿರೋಧವಾಗುತ್ತಿದೆ. ರೈಲು ಮಾರ್ಗ ಆಗಿದ್ದೆ ಆದಲ್ಲಿ ಇಡೀ ಉತ್ತರ ಕರ್ನಾಟಕ ಮುಂಬೈ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಲು ಅವಕಾಶವಾಗಲಿದೆ ಎಂದು ಜೋಶಿ ತಿಳಿಸಿದರು.
Kshetra Samachara
10/12/2021 02:21 pm