ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹ

ಧಾರವಾಡ : ನ.1 ರಂದು ಕನ್ನಡಿಗರ ಹಬ್ಬ ಕರ್ನಾಟಕ ರಾಜ್ಯೋತ್ಸವ ಗಡಿನಾಡು ಬೆಳಗಾವಿಯಲ್ಲಿ ಅದ್ಧೂರಿಯಾಗಿ ಪ್ರತಿವರ್ಷವು ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬರುತ್ತಿದ್ದು,ಆದರೆ ಈ ವರ್ಷ ಕನ್ನಡಿಗರ ಹಬ್ಬ ರಾಜ್ಯೋತ್ಸವವನ್ನು ಆಚರಿಸಲು ಅನುಮತಿಯನ್ನು ಕೊಡುತ್ತಿಲ್ಲ . ರಾಜ್ಯೋತ್ಸವವನ್ನು ಆಚರಿಸಲು ಅನುಮತಿಯನ್ನು ನೀಡದೇ ಇರುವುದು ಕನ್ನಡಿಗರಿಗೆ ಮಾಡುತ್ತಿರುವ ಅಪಮಾನವಾಗಿದ್ದು, ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಅನುಮತಿ ನೀಡುವಂತೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗದ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೋಕಾಕ್ ಆಗ್ರಹಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನೆ ನಡೆಸಿದ ಅವರು,ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಉಪ ಚುನಾವಣೆಯಲ್ಲಿ ಸಾವಿರಾರು ಜನರನ್ನು ಸೇರಿಸಿ ರ್ಯಾಲಿ ಹಾಗೂ ಬಿಹಿರಂಗ ಸಭೆಗಳನ್ನು ಮಾಡುತ್ತಿದ್ದು,ಅದಕ್ಕೆ ಯಾವ ನಿಯಮಗಳು ಅಡ್ಡಿ ಬರುವುದಿಲ್ಲವೇ .. ? ಬೆಳಗಾವಿಯಲ್ಲಿ ರಾಜ್ಯೋತ್ಸವವನ್ನು ಆಚರಿಸಲು ಅನುಮತಿಯನ್ನು ನೀಡದಿದ್ದರೆ ಕನ್ನಡಿಗರ ಕೆಂಗಣ್ಣಿಗೆ ಸರ್ಕಾರದ ನೇರವಾಗಿ ಗುರಿಯಾಗುತ್ತದೆ ಸರ್ಕಾರ ಇಂತಹ ಕ್ರಮವನ್ನು ಹಿಂದೆ ತೆಗೆದುಕೊಂಡು ಅದ್ದೂರಿ ರಾಜ್ಯೋತ್ಸವಕ್ಕೆ ಅನುಮತಿಯನ್ನು ನೀಡಿದರೆ ಸಂತೋಷದಿಂದ ರಾಜ್ಯೋ ತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತೇವೆ, ಒಂದು ವೇಳೆ ಅನುಮತಿಯನ್ನು ನೀಡದಿದ್ದರೆ ರೊಚ್ಚಿಗೆದ್ದು ಕನ್ನಡಪರ ಸಂಘಟನೆಗಳೆಲ್ಲ ಕೂಡಿಕೊಂಡು ಬೆಳಗಾವಿಯಲ್ಲಿ ವಿಜೃಂಭಣೆಯಿಂದ ರಾಜ್ಯೋತ್ಸವವನ್ನು ಆಚರಿಸುತ್ತೇವೆ ಎಂದು ಆಗ್ರಹಿಸಿದರು.ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Edited By : Manjunath H D
Kshetra Samachara

Kshetra Samachara

26/10/2021 02:07 pm

Cinque Terre

17.18 K

Cinque Terre

0

ಸಂಬಂಧಿತ ಸುದ್ದಿ