ಧಾರವಾಡ: ಕುಡಿಯುವ ನೀರಿಗೆ ಮೀಟರ್ ಅಳವಡಿಸುತ್ತಿರುವುದನ್ನು ವಿರೋಧಿಸಿ ಆರ್‌ಕೆಎಸ್ ರೈತ ಸಂಘಟನೆ ನೇತೃತ್ವದಲ್ಲಿ ತೇಗೂರು ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.
ಕುಡಿಯುವ ನೀರು ಮಾರಾಟದ ವಸ್ತುವಲ್ಲ.. ಕುಡಿಯುವ ನೀರಿಗೆ ಮೀಟರ್ ಅಳವಡಿಕೆಯನ್ನು ಒಪ್ಪುವುದಿಲ್ಲ ಎಂಬ ಘೋಷಣೆಗಳನ್ನು ಕೂಗಲಾಯಿತು.
ದೇಶದ ಜನತೆಯ ಆರ್ಥಿಕ ಪರಿಸ್ಥಿತಿ ಕುಗ್ಗಿರುವಾಗ ನಮ್ಮನ್ನಾಳುವ ಸರ್ಕಾರಗಳು ಜನತೆಯ ಒಳಿತಿಗಾಗಿ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಬೇಕಾಗಿರುವುದು ಒಂದು ಜನಪರ ಸರ್ಕಾರದ ಜವಾಬ್ದಾರಿ. ಆದರೆ ಇಂದಿನ ಕೇಂದ್ರ ಬಿಜೆಪಿ ಸರ್ಕಾರ ಮೇಲಿಂದ ಮೇಲೆ ಜನತೆಯ ಮೇಲೆ ತೆರಿಗೆಯನ್ನು ಹೇರುವುದು ಹಾಗೂ ಬೆಲೆ ಏರಿಕೆ ಮಾಡುತ್ತಿರುವುದು ಜನ ವಿರೋಧಿ ದೋರಣೆಯಾಗಿದೆ. ಮನೆ ಬಾಗಿಲಿಗೆ ನೀರು ಕೈಯಲ್ಲೇ ಕರೆಂಟು ಎಂದು ಹೇಳಿ ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ಮಾಡಿ ಜನತೆಯನ್ನು ಹಾಡುಹಗಲೇ ದರೋಡೆ ನಡೆಸಲು ಹೊರಟಿದೆ. ಕುಡಿಯುವ ನೀರು ನೈಸರ್ಗಿಕವಾಗಿ ಸಿಗುವಂತದ್ದು ಅದನ್ನು ಕೂಡ ಮಾರಾಟದ ವಸ್ತುವನ್ನಾಗಿ ಮಾಡಿ ಜನತೆಯನ್ನು ಲೂಟಿ ಹೊಡೆಯುವ ಸರ್ಕಾರದ ನೀತಿಯನ್ನು ನಾವು ಒಪ್ಪುವುದಿಲ್ಲ ಎಂದು ಗ್ರಾಮಸ್ಥರು ಮೀಟರ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿದರು.
Kshetra Samachara
22/10/2021 10:16 pm