ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ

ಕಲಘಟಗಿ: ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಯನ್ನು ಪ್ರಾರಂಭಿಸಿದರು.

ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ,ನೂತನ ಪಿಂಚಣಿ ಯೋಜನೆ ರದ್ಧತಿ ಹಲವಾರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ,ದಿ:ಅ 21ರಿಂದ ಅ 29 ರವರೆಗೆ ಕಪ್ಪು ಪಟ್ಟಿ ಧರಿಸಿ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುತ್ತಾ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾನಿರತ ಶಿಕ್ಷಕರು ತಿಳಿಸಿದರು.

ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀಮತಿ ಉಮಾದೇವಿ ಬಸಾಪುರ

ಮುಖಾಂತರ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಚಿಕ್ಕನರ್ತಿ,ಉಮೇಶ ಬೆರೂಡಗಿ,ಜಗದೀಶ ವಿರಕ್ತಮಠ,ರಮೇಶ ಹೊಲ್ತಿಕೋಟಿ,ಶ್ರೀಮತಿ ಆರ್ ವಿ ದೇಶಪಾಂಡೆ, ಶ್ರೀಮತಿ ಆರ್ ವಾಯ್ ರಜಪುತ,ಶಿವಕುಮಾರ ಪರವಾಪುರ,ಖಾದರಅಲಿ ನದಾಫ್,ಬಿ ಎಫ್ ಉಳ್ಳಾಗಡ್ಡಿ,ಬಿ ಬಿ ಕಿಚಡಿ,ಪಿ ಎನ್ ಹರ್ತಿ,ಎಲ್ ಬಿ ಭಜಂತ್ರಿ,ಡಿ ಡಿ ಅಲಿಬಾಯಿ,ಮಹಾದೇವಪ್ಪ ಹುಚ್ಚಣ್ಣವರ,ಸಿ ಎಮ್ ಪಾಟೀಲ ಇದ್ದರು.

Edited By : Nagesh Gaonkar
Kshetra Samachara

Kshetra Samachara

22/10/2021 02:45 pm

Cinque Terre

24.34 K

Cinque Terre

0

ಸಂಬಂಧಿತ ಸುದ್ದಿ