ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : 104 ಆರೋಗ್ಯ ಸಹಾಯವಾಣಿ ಸಿಬ್ಬಂದಿಗಳಿಗೆ ಬಡ್ತಿ ನೀಡುವಂತೆ ಸಚಿವರಿಗೆ ಮನವಿ

ಹುಬ್ಬಳ್ಳಿ : ಸಕಾಲದಲ್ಲಿ ವೇತನ ಪಾವತಿಯಾಗುತ್ತಿಲ್ಲ, ಬಡ್ತಿ ನೀಡುವುದಾಗಿ ಭರವಸೆ ಕೊಟ್ಟು ವರ್ಷ ಕಳೆದರೂ ಬಡ್ತಿ ನೀಡುತ್ತಿಲ್ಲ ಎಂದು, 104 ಆರೋಗ್ಯ ಸಹಾಯವಾಣಿಯ ಸಿಬ್ಬಂದಿ ನಗರದ ಐಟಿ ಪಾರ್ಕ್‌ದಲ್ಲೆ ಪ್ರತಿಭಟನೆ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕೊರೊನಾ ಸಂಕಷ್ಟ ಸಮಯದಲ್ಲಿ ಎಡೆಬಿಡದೇ ಕಾರ್ಯನಿರ್ವಹಿಸಿದರೂ ಪ್ರೋತ್ಸಾಹ ಧನ ಸಿಕ್ಕಿಲ್ಲ, 104 ಆರೋಗ್ಯ ಸಹಾಯವಾಣಿ ಜೊತೆಗೆ ಆಪ್ತಮಿತ್ರ, ಮಹಿಳಾ ಸಹಾಯವಾಣಿ ಸೇರಿದಂತೆ ವಿವಿಧ ಸಹಾಯವಾಣಿಗಳ ಕಾರ್ಯ ನಿರ್ವಹಿಸಿದರೂ, ಕಳೆದ 2 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಆದ್ದರಿಂದ ನಮ್ಮನ್ನು ನೆಚ್ಚಿದ ಕುಟುಂಬಗಳು ಬೀದಿಗೆ ಬರುವ ಹಂತಕ್ಕೆ ತಲುಪಿದೆ. ಕೂಡಲೇ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

Edited By : Shivu K
Kshetra Samachara

Kshetra Samachara

09/10/2021 01:52 pm

Cinque Terre

15.92 K

Cinque Terre

0

ಸಂಬಂಧಿತ ಸುದ್ದಿ