ಹುಬ್ಬಳ್ಳಿ: ಕಳೆದ 20 ವರ್ಷದ ಹಿಂದೆ ಪ್ರಾರಂಭವಾದ ಹೋರಟಕ್ಕೆ ಇಂದು ಜಯ ಸಿಕ್ಕಿದ್ದು, ಸಧ್ಯ ಈಗ ಎಲ್ಲರಿಗು ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಚಾಮುಂಡೇಶ್ವರಿ ನಗರದಲ್ಲಿ ಹಮ್ಮಿಕೊಂಡಿದ್ದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಈ ಉಪ ಚುನಾವಣೆ ಮುಗಿದ ನಂತರ, ಉತ್ತರ ಕರ್ನಾಟಕದಲ್ಲಿ ಹಕ್ಕುಪತ್ರ ಪ್ರಾರಂಭ ಮಾಡಿದರೆ ಚಾಮುಂಡೇಶ್ವರಿ ನಗರದಿಂದ ಪ್ರಾರಂಭ ಮಾಡಲಾಗುವುದು ಎಂದು ಹೇಳಿದ್ದೀವಿ ಅದರಂತೆ ಮಾಡಲಾಗಿದೆ ಎಂದರು. ಹುಬ್ಬಳ್ಳಿಯ ಗಾಂಧಿನಗರ, ಬೆಂಗೇರಿ ಜೊತೆಗೆ ಲೋಕ್ಕಪ್ಪನ ಹಕ್ಕಲದಲ್ಲಿ ಹಕ್ಕುಪತ್ರ ನೀಡಲಾಗುವುದು.
ಹಕ್ಕುಪತ್ರ ಹೋರಾಟ ಗಿರಣಿಚಾಳದಿಂದ ಪ್ರಾರಂಭ ಆಗಿತ್ತು.
ಧರಣಿ ಸತ್ಯಾಗ್ರಹ ಮಾಡಿ ಮನೆ ಕೆಡವುದನ್ನು ನಿಲ್ಲಿಸಿದ್ದೀವಿ. ಪರಿಚಯ, ಸ್ವಾದೀನಪತ್ರ ನೀಡಬೇಕೆಂದು ಬೇಡಿಕೆ ಇಟ್ಟಿದ್ವಿ ಅದು ಇಂದು ಈಡೇರಿದೆ. ಮುಂದಿನ ದಿನಗಳಲ್ಲಿ ಮಾದವ ನಗರ, ಮಾರುತಿ ನಗರ, ಗಾಂಧಿವಾಡ, ಶಿವಪುತ್ರ ನಗರ, ತೊರವಿಹಕ್ಕಲ ಸೇರಿದಂತೆ ಎಲ್ಲಡೆ ಹಕ್ಕುಪತ್ರ ನೀಡಲಾಗುವುದು ಎಂದರು.
ಇದೊಂದು ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಆದ ದಿನವಾಗಿದೆ. ವಿರೋಧ ಪಕ್ಷ ಇದ್ದಾಗ್ಯೂ ಈ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಬಿ.ಎಸ್.ವೈ ಸರ್ಕಾರ ಬಂದಾಗ ವಿ.ಸೋಮಣ್ಣ ಅವರ ಪ್ರಯತ್ನದ ಫಲವಾಗಿ ಈ ಕೆಲಸ ಆಗಿದೆ. ಫೀ ಇದೆ. ಹಕ್ಕುಪತ್ರ ಮನೆಯಲ್ಲಿ ಇಡದೇ ನೋಂದಾಯಿತ ಮಾಡಿಕೊಳ್ಳಬೇಕು. ಅಕ್ರಮ ಸಕ್ರಂ ಆಗಬಾರದು, ಕಂದಾಯ ಇಲಾಖೆಯ ವಿಶೇಷ ಸೂಚನೆ ಮೇರೆಗೆ ಕೆಲಸ ಆಗಲಿದೆ ಎಂದರು.
ನರೇಂದ್ರ ಮೋದಿ ಅವರ ಕನಸು 2022 ರೊಳಗೆ ಯಾರಿಗೆ ಸೂರು ಇಲ್ಲ, ಅವರಿಗೆ ಮನೆ ಕೊಡುವ ಗುರಿ ಹೊಂದಿದ್ದು ಅದರಂತೆ ರಾಜ್ಯ ಸರ್ಕಾರ ಮಾಡಲಿದೆ. 2000 ರೂ. ಎಸ್ ಸಿ, ಎಸ್ ಟಿ, 4000 ರೂ. ಜನರಲ್ ಹಣ ತುಂಬಬೇಕು.
ಸರ್ಕಾರಿ ಭೂಮಿಯಲ್ಲಿ ಕಟ್ಟಿದ್ದಾರೆ. ಅವರಿಗೆ ಈ ಹಕ್ಕುಪತ್ರ ನೀಡಲಾಗುತ್ತಿದೆ. ಖಾಸಗಿ ಭೂಮಿಯಲ್ಲಿ ಸ್ಲಂ ಬೆಳೆದಿವೆ. ಮುಂದೆ ಅಕ್ರಂಸಕ್ರಂ ಆಗೋದು ಬೇಡಾ. ಖಾಸಗಿ ಭೂಮಿ ಮಾಲೀಕರು ಸ್ಲಂ ನಿವಾಸಿಗಳು ಸಹಕಾರ ಇದ್ದರೆ ಡಿಸಿ ಹೆಸರಿನಲ್ಲಿ ಹಕ್ಕು ಬಿಟ್ಟು ಕೊಟ್ಟಿದ್ದೇನೆ ಎಂದು ಬರೆದು ಕೊಟ್ಟರೆ ಅದನ್ನು ಸರ್ಕಾರ ಪಡೆದು ಜನರಿಗೆ ಒದಗಿಸುವ ಕೆಲಸ ಮಾಡಲಾಗುವುದು. ಅರಣ್ಯ ಪ್ರದೇಶದಲ್ಲಿನ ಡಿಮ್ಮ ಫಾರೆಸ್ಟ್ ತಗದು ಹಾಕಿ ಮನೆ ಕೊಡುವ ಕೆಲಸ ಆಗಬೇಕು ಎಂದರು. ಅನಂತಕುಮಾರ ನಗರಾಭಿವೃದ್ಧಿ ಸಚಿವರಾಗಿದ್ದಾಗ ವಾಂಬೆ ಯೋಜನೆ ತಂದು 5000 ಮನೆಗಳನ್ನು ನೀಡಿದರು ಅವು ಹೆಚ್ಚಾಗಿ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಆಗಿವೆ ಎಂದರು.
Kshetra Samachara
02/10/2021 05:35 pm