ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: ಮೌಲಾನಾ ಆಜಾದ್ ಶಾಲಾ ಕಟ್ಟಡ ಭೂಮಿ ಪೂಜೆ ನೆರವೇರಿಸಿದ ಶಾಸಕ ರಾಮಣ್ಣ ಲಮಾಣಿ...!

ಲಕ್ಷ್ಮೇಶ್ವರ: ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ರಾಜ್ಯ ಸರ್ಕಾರ ವಸತಿ ನಿಲಯಗಳನ್ನು ತೆರೆದು ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅವುಗಳ ಉಪಯೋಗ ಪಡೆದು ಸಮಾಜದಲ್ಲಿ ಉನ್ನತ ಗುರಿ ಮುಟ್ಟಿ ರಾಷ್ಟ್ರದ ಅಭ್ಯುದಯಕ್ಕೆ ಪ್ರಯತ್ನಿಸಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಲಕ್ಷ್ಮೇಶ್ವರ ಪಟ್ಟಣದ ಮೌಲಾನ ಆಜಾದ್ ಶಾಲಾ ಕಟ್ಟಡ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಾಜದಲ್ಲಿ ಅನೇಕ ಅವಕಾಶಗಳಿದ್ದು, ಉತ್ತಮ ಕೌಶಲ್ಯದಿಂದ ಇಡೀ ಜಗತ್ತನ್ನೇ ಗೆಲ್ಲಬಹುದಾಗಿದೆ. ಈಗಾಗಿ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ವ್ಯಾಸಂಗವನ್ನು ವ್ಯರ್ಥ ಮಾಡದೇ ಸಂಸ್ಕ್ರತಿ ಸಂಸ್ಕಾರವನ್ನು ಮೈಗೂಡಿಸಿಕೊಂಡು ಉನ್ನತ ಗುರಿ ಮುಟ್ಟಲು ಪ್ರಯತ್ನಿಸಬೇಕು ಎಂದರು.

Edited By : Nagesh Gaonkar
Kshetra Samachara

Kshetra Samachara

30/09/2021 08:25 pm

Cinque Terre

26.6 K

Cinque Terre

0

ಸಂಬಂಧಿತ ಸುದ್ದಿ