ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಭಾರತ್ ಬಂದ್ ಹಿನ್ನೆಲೆ, ತಹಶೀಲ್ದಾರ್ ಗೆ ಮನವಿ ಸಲ್ಲಿಕೆ

ಅಳ್ನಾವರ: ಭಾರತ್ ಬಂದ್ ಹಿನ್ನೆಲೆಯಲ್ಲಿ 'ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ' ವತಿಯಿಂದ ಅಳ್ನಾವರ ತಾಲೂಕು ತಹಶೀಲ್ದಾರ್ ರವರಿಗೆ ವಿವಿಧ ಬೇಡಿಕೆಗಳನ್ನೊಳ ಗೊಂಡ ಮನವಿಯನ್ನು ಸಲ್ಲಿಸಿದರು.

ಹಸಿರು ಶಾಲು ಹೊತ್ತ ರೈತ ಸಂಘಟನೆ ಸದಸ್ಯರು ಎ ಪಿ ಎಂ ಸಿ ಇಂದ ತಹಶೀಲ್ದಾರ್ ಕಛೇರಿ ವರೆಗೆ ಕಾಲ್ನಡಿಗೆಯಲ್ಲಿ ಶಾಂತಿಯುತವಾಗಿ ಪಾದಯಾತ್ರೆ ಮೂಲಕ ಬಂದು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.

ಭಾರತದಲ್ಲಿ ಇತ್ತೀಚೀನ ಬೆಳವಣಿಗೆಗಳು ರೈತರ ವಿರೋಧ ವಾಗಿದ್ದು ಬದುಕು ಸಾಗಿಸಲು ಹರ ಸಾಹಸ ಪಡಬೇಕಾಗಿದೆ.ಅತೀಯಾದ ಬೆಲೆ ಏರಿಕೆ,ಕೃಷಿ ಕಾಯ್ದೆ ತಿದ್ದುಪಡಿ ಮಸೂದೆ,ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಇರುವುದು ಇದರಿಂದ ರೈತರು ಆತ್ಮಹತ್ಯೆ ಗೆ ದಾರಿ ಹುಡುಕುವಂತಾಗಿದೆ ಎಂದು ಹಸಿರು ಸೇನೆ ಅಧ್ಯಕ್ಷ ಅಲ್ಲಾಭಕ್ಷ ಕುಂದುಬೈನವರ್ ಹೇಳಿದರು.

ಹನ್ನೊಂದು ಗ್ರಾಮಗಳನ್ನೂಳಗೊಂಡ ಅತಿ ಚಿಕ್ಕ ತಾಲೂಕು ಅಳ್ನಾವರ.ಈ ಎಲ್ಲ ಗ್ರಾಮಗಳ ಕೆರೆಗಳಿಗೆ ಮಲಪ್ರಭಾ ನದಿ ನೀರು ಜೋಡಣೆ ಮಾಡಿ ಸತತ ನೀರು ಸರಬರಾಜು ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ರೈತರಿಗೆ ಉಪಯುಕ್ತವಾಗುವ ರೀತಿ ಸರ್ಕಾರ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳ ಬೇಕು ಎಂದು ವಾಸುದೇವ ಕಲ್ಲಾಪುರ ನುಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು,ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

27/09/2021 04:45 pm

Cinque Terre

26.54 K

Cinque Terre

1

ಸಂಬಂಧಿತ ಸುದ್ದಿ