ಕುಂದಗೋಳ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ನೀಡಿರುವ 'ಭಾರತ ಬಂದ್' ಗೆ ಕುಂದಗೋಳ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಗಂಟೆ 12 ಆದ್ರೂ ಯಾವುದೇ ಪ್ರತಿಕ್ರಿಯೆ ಕಂಡು ಬಂದಿಲ್ಲ.
ಇನ್ನೂ ಭಾರತ್ ಬಂದ್ ಸುಧ್ಧಿ ತಿಳಿದು ಕುಂದಗೋಳ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಂಚಾರಕ್ಕೆ ವಾಲದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಜನ ಕಂಡು ಬಂದಿದ್ದು, ಬೀದಿ ಬದಿ ಹಣ್ಣು, ಹೂ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಖಾಲಿ ಕುಳಿತಿದ್ದು ಎಂದಿನಂತೆ ಸಾರಿಗೆ ಸಂಚಾರ, ಮಾಣಿಜ್ಯ ಮಳಿಗೆಗಳು ಆರಂಭವಾಗಿವೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ಅಧಿಕಾರಿಗಳು ರೈತ ಸಂಘಟನೆಗಳು ಯಾವುದೇ ಸಂದರ್ಭದಲ್ಲಿ ಪ್ರತಿಭಟನೆ ಕೈಗೊಳ್ಳಬಹುದೆಂದು ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಗಾಳಿ ಮರೇಮ್ಮದೇವಿ ದೇವಸ್ಥಾನದ ಬಳಿ ಕರ್ತವ್ಯ ನಿರತರಾಗಿದ್ದಾರೆ.
Kshetra Samachara
27/09/2021 12:41 pm