ಹುಬ್ಬಳ್ಳಿ: ನೂತನ ಸಿಎಂ ರಾಜ್ಯದ ಗಾಣಿಗ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದೆ. ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡಿ ಗಾಣಿಗ ಸಮೂದಾಯದ ಮುಖಂಡ ಲಕ್ಷ್ಮಣ ಸವದಿ ಅವರಿಗೆ, ಸಚಿವ ಸ್ಥಾನ ನೀಡಬೇಕೆಂದು ವಿಜಯಪುರದ ದಿಗಂಬರೇಶ್ವರ ಸಂಸ್ಥಾನಮಠದ ಶ್ರೀ ಕಲ್ಲಿನಾಥ ಮಹಾಸ್ವಾಮೀಜಿ ಒತ್ತಾಯಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ 85 ಲಕ್ಷಕ್ಕೂ ಅಧಿಕ ಗಾಣಿಗ ಸಮೂದಾಯದ ಜನರಿದ್ದು, ಇವರೆಲ್ಲರ ಆರ್ಶೀವಾದದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ನಿಟ್ಟಿನಲ್ಲಿಯೇ ಈ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಸಮೂದಾಯಕ್ಕೆ ಮನ್ನಣೆ ನೀಡಿ ಲಕ್ಷ್ಮಣ ಸವದಿ ಅವರನ್ನು ತಮ್ಮ ಸಂಪುಟದಲ್ಲಿ ಸಾರಿಗೆ ಸಚಿವರು, ಉಪಮುಖ್ಯಮಂತ್ರಿಗಳಾಗಿ ಮಾಡಿದರು. ಆದರೆ ಸದ್ಯದ ಸಿಎಂ ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ. ಇದನ್ನು ಸಮೂದಾಯ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಸಮೂದಾಯದ ಮುಖಂಡರಿಗೆ ಸ್ಥಾನಮಾನ ನೀಡಬೇಕು. ಇಲ್ಲದೇ ಹೋದರೆ ಮುಂದಿನ ಚುನಾವಣೆಯಲ್ಲಿ ಸಮೂದಾಯದ ಜನರು ತಕ್ಕ ಉತ್ತರ ನೀಡಲಿದ್ದಾರೆಂದು ಎಂದು ಎಚ್ಚರಿಕೆ ನೀಡಿದರು.
ಇನ್ನು, 2023 ರಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ನಾಗರಾಜ ಛಬ್ಬಿ ಅವರಿಗೆ ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಫಾರಂ ನೀಡಬೇಕು. ಜಮಖಂಡಿ ಕ್ಷೇತ್ರದಿಂದ ಆನಂದ ನ್ಯಾಮಗೌಡ, ಭದ್ರಾವತಿ ಕ್ಷೇತ್ರದಿಂದ ಸಂಗಮೇಶ ಟಿಕೆಟ್ ನೀಡಬೇಕೆಂದು ಇದೇ ವೇಳೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮೂದಾಯದ ಮುಖಂಡರಾದಚಂದ್ರಶೇಖರ ಕಾಕಂಡಕಿ , ಬಸವರಾಜ ಔದರಿ ಇದ್ದರು
Kshetra Samachara
18/09/2021 12:33 pm