ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಿಂದೂ ಧರ್ಮದ ಆಚರಣೆಗಳಿಗೆ ನಿರ್ಬಂಧ ಹೇರುವುದು ಸರಿಯಲ್ಲ: ಮುತಾಲಿಕ್

ಧಾರವಾಡ: ಕೋವಿಡ್ ನೆಪ ಹೇಳಿ ಹಿಂದೂ ಧರ್ಮದ ಆಚರಣೆಗಳಿಗೆ ನಿರ್ಬಂಧ ಹೇರುತ್ತಿರುವುದು ಸರಿಯಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಶ್ರೀ ಸಿದ್ದಿವಿನಾಯಕ ಯುವಕ ಮಂಡಳಿಯವರು ಹಮ್ಮಿಕೊಂಡಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಮಗಳು ಕೇವಲ ಹಿಂದೂ ಧರ್ಮದ ಆಚರಣೆಗಳಿಗೆ ಮಾತ್ರ ಅನ್ವಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಚುನಾವಣೆ ವೇಳೆ ಸಭೆ, ಸಮಾರಂಭ, ಮೆರವಣಿಗೆ ಮಾಡುವ ರಾಜಕೀಯ ಪಕ್ಷಗಳಿಗೆ ಕೋವಿಡ್ ನಿಯಮ ಅನ್ವಯವಾಗುವುದಿಲ್ಲವೇ? ಎಂದು ಮುತಾಲಿಕ್ ಪ್ರಶ್ನಿಸಿದರು.

ಕೇಂದ್ರ ಮಂತ್ರಿಗಳ ಮಗಳ ಮದುವೆ ಸಮಾರಂಭದಲ್ಲಿ ಐದು ಸಾವಿರ ಜನ ಸೇರಿದ್ದರು. ಆಗ ಕೋವಿಡ್ ನಿಯಮಗಳು ಎಲ್ಲಿ ಹೋಗಿದ್ದವು? ಈಗ ಗಣಪತಿ ಆಚರಣೆಗೆ ಕೋವಿಡ್ ನಿಯಮದ ನೆಪ ಹೇಳಲಾಗುತ್ತಿದೆ. ಗಣೇಶೋತ್ಸವ ಆಚರಣೆ ನಮ್ಮ ಸಂಪ್ರದಾಯ. ನಾವು ಸಂಪ್ರದಾಯ ಬಿಟ್ಟು ಹೋಗುವುದಿಲ್ಲ. ಕೋವಿಡ್ ನಿಯಮಾವಳಿ ಪ್ರಕಾರವೇ ನಾವು ಗಣೇಶೋತ್ಸವ ಆಚರಿಸುತ್ತೇವೆ ಎಂದರು.

ಹಿಂದೂ ಧರ್ಮದ ಆಚರಣೆಗಳ ಮೇಲೆ ವಿನಾಕಾರಣ ನಿರ್ಬಂಧ ಹೇರುವುದು ಸರಿಯಲ್ಲ. ಅದನ್ನು ನಾವು ಸಹಿಸಿಕೊಳ್ಳುವುದೂ ಇಲ್ಲ. ಎಲ್ಲ ಹಿಂದೂ ಯುವಕರು ಮತಾಂತರದ ವಿರುದ್ಧ ಹೋರಾಟ ಮಾಡಬೇಕಿದೆ. ಮತಾಂತರ ಎನ್ನುವುದು ಪೆಡಂಭೂತದಂತೆ ಕಾಡುತ್ತಿದೆ. ಅದನ್ನು ವಿರೋಧಿಸುವ ಶಕ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಎಷ್ಟು ದಿನಕ್ಕೆ ಗಣಪತಿ ವಿಸರ್ಜನೆ ಮಾಡುವ ಪದ್ಧತಿ ರೂಢಿಯಲ್ಲಿ ಬಂದಿದೆಯೋ ಅಷ್ಟೇ ದಿನಕ್ಕೆ ವಿಸರ್ಜನೆ ಮಾಡಿ ಎಂದು ಯುವಕ ಮಂಡಳಿಗಳ ಸದಸ್ಯರಿಗೆ ಮುತಾಲಿಕ್ ಅಭಯ ನೀಡಿದರು.

ಗ್ರಾಮದ ಹಿರಿಯರಾದ ಗಂಗಪ್ಪ ಜವಳಗಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ ಆಯಟ್ಟಿ ಸೇರಿದಂತೆ ಯುವಕ ಮಂಡಳಿಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಮುತಾಲಿಕ್ ಅವರಿಗೆ ಹೆಣ್ಣು ಮಕ್ಕಳು ಆರತಿ ಬೆಳಗಿ ಸ್ವಾಗತ ಕೋರಿದರು. ಗ್ರಾಮದ ಮೊದಲ ಬಸ್‌ ನಿಲ್ದಾಣದಿಂದ ಮುತಾಲಿಕ್ ಅವರನ್ನು ಪಾದಯಾತ್ರೆ ಮುಖಾಂತರ ಕರೆದುಕೊಂಡು ಬರಲಾಯಿತು.

Edited By : Nagesh Gaonkar
Kshetra Samachara

Kshetra Samachara

14/09/2021 01:08 pm

Cinque Terre

24.74 K

Cinque Terre

5

ಸಂಬಂಧಿತ ಸುದ್ದಿ