ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಗ್ರಾಮೀಣ ಕೂಲಿಕಾರ ಸಂಘಟನೆಯಿಂದ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನಾ ಜಾಥಾ

ಕಲಘಟಗಿ: ಉದ್ಯೋಗ ಖಾತ್ರಿ ಗ್ರಾಮೀಣ ಕೂಲಿ ಕಾರ್ಮಿಕರು ಪಟ್ಟಣದ ಎಪಿಎಂಸಿಯಿಂದ ಜಾಥಾ ಮಾಡುವ ಮೂಲಕ ವಿವಿಧ ಬೇಡಿಕೆ ಈಡೇರಿಸುವಂತೆ ಸೋಮವಾರ ಒತ್ತಾಯಿಸಿದರು.

ಗ್ರಾಮೀಣ ಕೂಲಿಕಾರ ಸಂಘಟನೆಯ ಆಶ್ರಯದಲ್ಲಿ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿತ್ತು.ನಂತರ ತಾಲೂಕು ಪಂಚಾಯಿತಿಗೆ ಆಗಮಿಸಿದ ಕೂಲಿಕಾರರು ಮೇಟ್ಸ್ ಪಗಾರ,ಸಲಕರಣೆ ವೆಚ್ಚ,ಕ್ರೀಯಾ ಯೋಜನೆ,ಕೆಲಸ ಮಾಡಿದ ಪಗಾರ,ಜಾಬ್ ಕಾರ್ಡ್‌ ಹಾಗೂ ಕೆಲಸಕ್ಕೆ ಅರ್ಜಿ ತೆಗೆದುಕೊಳ್ಳುವಂತಹ ಸಮಸ್ಯೆಗಳನ್ನು ಅಧಿಕಾರಿಗಳ‌ ಗಮನಕ್ಕೆ ತಂದು ಮನವಿ‌ ನೀಡಲಾಯಿತು.

ಈ ಸಂದರ್ಭದಲ್ಲಿ ತಾಲೂಕಿನ ಹಲವಾರು ಗ್ರಾಮಗಳಿಂದ ಕೂಲಿ ಕಾರ್ಮಿಕರು ಜಾಥಾದಲ್ಲಿ ಭಾಗವಹಸಿದ್ದರು.

Edited By : Nagesh Gaonkar
Kshetra Samachara

Kshetra Samachara

13/09/2021 10:42 pm

Cinque Terre

43.35 K

Cinque Terre

0

ಸಂಬಂಧಿತ ಸುದ್ದಿ