ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...!
ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಚುನಾವಣೆ ನಡೆದರೂ ಕೂಡ ಚುನಾಯಿತ ಅಭ್ಯರ್ಥಿಗಳು ಅಧಿಕಾರ ವಹಿಸಿಕೊಳ್ಳಲು ಮತ್ತೊಂದು ಚುನಾವಣೆ ಎದುರಿಸಬೇಕಿದೆ. ಹಾಗಿದ್ದರೇ ಯಾವುದು ಆ ಚುನಾವಣೆ...? ಅಲ್ಲಿ ನಡೆದಿದ್ದಾರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..
ಕಳೆದ ಎರಡು ವರ್ಷ ಒಂಬತ್ತು ತಿಂಗಳ ಕಾಲ ಯಾವುದೇ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರ ನಡೆಸಿಕೊಂಡು ಬಂದಿದ್ದ ಮಹಾನಗರ ಪಾಲಿಕೆಗೆ 82 ಚುನಾಯಿತ ಪ್ರತಿನಿಧಿಗಳು ಬಂದಿದ್ದು, ಆದರೆ ಚುನಾಯಿತ ಪ್ರತಿನಿಧಿಗಳು ಅಧಿಕಾರ ವಹಿಸಿಕೊಳ್ಳುವ ಪೂರ್ವದಲ್ಲಿಯೇ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಬೇಕಿದ್ದು, ಇದಕ್ಕೆ ಚುನಾಯಿತ ಪ್ರತಿನಿಧಿಗಳೇ ವೋಟ್ ಮಾಡುವ ಮೂಲಕ ಮೇಯರ್ ಉಪಮೇಯರ್ ಆಯ್ಕೆ ಮಾಡಬೇಕಿದೆ.
ಇನ್ನೂ 82 ವಾರ್ಡಗಳಿಂದ 82 ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಿದ್ದು, ಬಿಜೆಪಿಯಿಂದ 39, ಕಾಂಗ್ರೆಸ್ 33, ಜೆಡಿಎಸ್ 01, ಎಐಎಂಐಎಂ 01, ಪಕ್ಷೇತರ 06 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇನ್ನೂ ಇವರಲ್ಲಿ ಒಬ್ಬರು ಮೇಯರ್ ಮತ್ತೊಬ್ಬರು ಉಪಮೇಯರ್ ಆಗಿ ಆಯ್ಕೆ ಆಗಬೇಕಿದೆ. ಈ ಒಂದು ಪ್ರಕ್ರಿಯೆಯು ಪ್ರಾದೇಶಿಕ ಆಯುಕ್ತರ ನಿರ್ದೇಶನದಲ್ಲಿ ನಡೆಯಲಿದ್ದು, ಚುನಾವಣೆಗೆ ದಿನಾಂಕ ಘೋಷಣೆ ಆಗಬೇಕಿದೆ.
ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಸಾಕಷ್ಟು ಪೈಪೋಟಿ ನಡೆಸಿದ್ದು, ಚುನಾಯಿತ ಜನಪ್ರತಿನಿಧಿಗಳ ಆಗಮನಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕೂಡ ಸಿದ್ಧತೆ ನಡೆಸಿದೆ. ಇನ್ನೂ ಚುನಾಯಿತ ಪ್ರತಿನಿಧಿಗಳಿಲ್ಲದೇ ಅನಾಥವಾಗಿದ್ದ ಪಾಲಿಕೆ ಮತ್ತಷ್ಟು ರಂಗು ಪಡೆದುಕೊಳ್ಳಲಿದೆ.
Kshetra Samachara
13/09/2021 07:30 pm