ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಚುನಾವಣೆ ಆಯೋಗವು ಬಿಜೆಪಿ ಸರ್ಕಾರದ ಕೈಗೊಂಬೆಯಾಗಿದೆ: ಹುಣಸಿಮರದ ಆರೋಪ

ಧಾರವಾಡ: ಬಿಜೆಪಿಯವರು ಹುಬ್ಬಳ್ಳಿ, ಧಾರವಾಡ ನಗರದ ಜನರಿಗೆ ಸುಳ್ಳು ಹೇಳುವುದರ ಮೂಲಕ ಮೋಸ ಮಾಡುತ್ತಿದ್ದಾರೆ. ಅವಳಿನಗರಕ್ಕೆ ಬಿಜೆಪಿ ದೊಡ್ಡ ಮಟ್ಟದ ಯಾವ ಯೋಜನೆಯನ್ನೂ ತಂದಿಲ್ಲ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯವರು ಹಣದ ಹೊಳೆ ಹರಿಸುವುದರ ಮೂಲಕ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಚುನಾವಣಾ ಆಯೋಗವು ಕೂಡ ಬಿಜೆಪಿ ಸರ್ಕಾರಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದೆ ಎಂದು ಹುಬ್ಬಳ್ಳಿ, ಧಾರವಾಡ ಮಹಾನಗರ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಗಂಭೀರ ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಪ್ರಾಮಾಣಿಕತೆ ಎನ್ನುವುದು ಇಲ್ಲ. ಪ್ರತಿ ಚುನಾವಣೆಗಳಲ್ಲಿ ತನ್ನ ಮೋಸದ ಆಟವನ್ನು ಮುಂದುವರೆಸುತ್ತಲೇ ಬಂದಿದೆ. ಅದನ್ನೇ ಪಾಲಿಕೆ ಚುನಾವಣೆಯಲ್ಲಿಯೂ ಮಾಡಿದೆ. ವಿವಿ ಪ್ಯಾಟ್ ಬಳಸದೇ ಪಾಲಿಕೆ ಚುನಾವಣೆ ನಡೆಸಲಾಗಿದೆ. ಇದು ಬಿಜೆಪಿಗೆ ಸಹಕಾರಿಯಾಗಿದೆ. ವಿವಿ ಪ್ಯಾಟ್ ಬಳಸಿ ಪಾಲಿಕೆ ಚುನಾವಣೆ ಮಾಡಿದ್ದೇ ಆದಲ್ಲಿ ಬಿಜೆಪಿಯವರು ಸ್ಥಾನ ಕಡಿಮೆಯಾಗುತ್ತಿದ್ದವು. ಅದನ್ನು ಗಮನದಲ್ಲಿಟ್ಟುಕೊಂಡು ಬೇರೆ ಮಾರ್ಗಗಗಳ ಮೂಲಕ ಒತ್ತಡ ಹಾಕಿ ಚುನಾವಣೆ ನಡೆಸಲಾಗಿದೆ ಎಂದು ಆರೋಪಿಸಿದರು.

ಪ್ರಸ್ತುತ 2020-21ನೇ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಒಟ್ಟು 48 ಜನ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಲಾಗಿತ್ತು. ಅದರಲ್ಲಿ 10 ರಿಂದ 12 ಜನ ಅಭ್ಯರ್ಥಿಗಳು ಗೆದ್ದು ಬರುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಒಬ್ಬರು ಅಭ್ಯರ್ಥಿ ಮಾತ್ರ ಗೆದ್ದು ಬಂದಿದ್ದಾರೆ. ಇದಕ್ಕೆ ಪ್ರಮುಖವಾಗಿ ನಮ್ಮ ಪಕ್ಷ ಸಂಘಟನೆ ಇಲ್ಲದಿರುವುದು. ಪಾಲಿಕೆ ಫಲಿತಾಂಶದಲ್ಲಿ ಹಿನ್ನಡೆಯಾಗಿದೆ. ಇದನ್ನು ನಾವು ಒಪ್ಪಿಕೊಂಡು ಮುಂಬರುವ ಚುನಾವಣೆಗಳು ಬರುವವರೆಗೂ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತೇವೆ. ಬೂತ್ ಮಟ್ಟದಿಂದ ಪಕ್ಷ ಸಂಘಟನೆಯೊಂದಿಗೆ ಮುಂಬರುವ ಚುನಾವಣೆಗಳನ್ನು ಎದುರಿಸುತ್ತೆವೆ ಎಂದು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

13/09/2021 05:03 pm

Cinque Terre

23.64 K

Cinque Terre

3

ಸಂಬಂಧಿತ ಸುದ್ದಿ