ಧಾರವಾಡ: ಈ ವರ್ಷ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲೇ ಆಗುತ್ತದೆ. ಎಂಬ ಭರವಸೆ ಇದೆ. ಹಿಂದಿನ ಸಿಎಂ ಯಡಿಯೂರಪ್ಪನವರಿಗೂ ನಾನು ಬೆಳಗಾವಿ ಅಧಿವೇಶನದ ಬಗ್ಗೆ ಪತ್ರ ಬರೆದಿದ್ದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಒಟ್ಟು 900 ಅಧಿಕಾರಿಗಳು, 300 ಶಾಸಕರು ಸೇರಿ ಬಹಳ ಜನ ಆಗುತ್ತಾರೆ. ಈಗ ಮಳೆಗಾಲ ಹಾಗೂ ಕೋವಿಡ್ ಇದೆ. ಹೀಗಾಗಿ, ಈಗಿನ ಅಧಿವೇಶನ ಬೆಂಗಳೂರಿನಲ್ಲೇ ಆಗುತ್ತದೆ. ಆದರೆ, ಸಿಎಂ ನಮ್ಮ ಕಡೆಯವರು. ಹೀಗಾಗಿ, ನವೆಂಬರ್-ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ಸಂಪೂರ್ಣ ಬೆಳಗಾವಿಯಲ್ಲಿ ಆಗುತ್ತದೆ ಎಂಬ ಭರವಸೆ ನೀಡಿದರು.
ಬೆಳಗಾವಿಯಲ್ಲಿ ಅಧಿವೇಶನ ಮಾಡಿಯೇ ತಿರುತ್ತೇವೆ. ಇಲ್ಲಿ ಅಧಿವೇಶನ ಆಗುವುದು ಖಚಿತ. ಈಗಾಗಲೇ ಕೆಲವು ಕಚೇರಿ ಜಿಲ್ಲೆಗೆ ಸ್ಥಳಾಂತರ ಸಹ ಮಾಡಿದ್ದಾರೆ. 9 ಕಚೇರಿ ಸ್ಥಳಾಂತರ ಮಾಡಲು ನಾನು ಕೇಳಿದ್ದೆ. ಈಗ ಅದರಲ್ಲಿ ಮೂರು ಕಚೇರಿ ಸ್ಥಳಾಂತರ ಆಗಿವೆ ಎಂದು ಹೇಳಿದರು.
Kshetra Samachara
08/09/2021 10:16 pm