ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಸಹ ಘೋಷಣೆಯಾಗಿದೆ. ಈ ಬಾರಿ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ 2ಎ ಗೆ ಮೀಸಲಾದರೇ ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಬಿಜೆಪಿ ಪಕ್ಷದಲ್ಲೀಗ ಮೇಯರ್ ಉಪಮೇಯರ್ ಸ್ಥಾನಕ್ಕೆ ಲಾಭಿ ಶುರುವಾಗಿದ್ದು, ಶೆಟ್ಟರ್- ಬೆಲ್ಲದ ಹಾಗೂ ಜೋಶಿ ಬೆಂಬಲಿಗರ ಮಧ್ಯೆ ಬೀಗ್ ಫೈಟ್ ಶುರುವಾಗಿದೆ...
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಘೋಷಣೆಯಾದ ಬಳಿಕ ಮೇಯರ ಉಪಮೇಯರ್ ಸ್ಥಾನಕ್ಕೆ ಫೈಪೋಟಿ ಶುರುವಾಗಿದೆ. 82 ಸ್ಥಾನಗಳ ಫೈಕಿ 39 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಪಕ್ಕಾ ಆಗಿದೆ. ಹೀಗಾಗಿ ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಮೂವರು ಹಿರಿಯ ಸದಸ್ಯರ ಮಧ್ಯೆ ಬಿಗ್ ಫೈಟ್ ಶುರುವಾಗಿದ್ದು, ಶಾಸಕ ಬೆಲ್ಲದ್, ಶೆಟ್ಟರ್ ಹಾಗೂ ಜೋಶಿ ಬಲಗೈ ಬಂಟರು ಮೇಯರ ಸ್ಥಾನಕ್ಕೆ ಲಾಭಿ ಶುರು ಮಾಡಿದ್ದಾರೆ.
ಪಾಲಿಕೆಯ 82 ವಾರ್ಡಗಳಲ್ಲಿ ಬರೋಬ್ಬರಿ 22 ಜನ ಹಿಂದುಳಿದ ಅ ವರ್ಗಕ್ಕೆ ಸೇರಿದ ಸದಸ್ಯರಿದ್ದಾರೆ. ಆದ್ರೆ ವಿಜೇತ ಸದಸ್ಯರ ಅರ್ಹ 22ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲವು ಸಾಧಿಸಿದ 10 ಜನರು, ಇಬ್ಬರು ಎಐಎಂಐಎಂ ಸದಸ್ಯರಿದ್ದಾರೆ. ಇನ್ನುಳಿದ 12 ಜನ ಸದಸ್ಯರು ಬಿಜೆಪಿಯಿಂದ ಗೆಲವು ಸಾಧಿಸಿದ್ದು ಇವರಲ್ಲಿ ಒಬ್ಬರು ಮೇಯರ್ ಆಗುವುದು ಪಕ್ಕಾ ಆಗಿದೆ. ಹೀಗಾಗಿ ಬಿಜೆಪಿಯ ಹಿರಿಯ ಸದಸ್ಯರು ಹಾಗೂ ಶಾಸಕರು, ಸಂಸದರ ಆಪ್ತರ ಮದ್ಯೆ ಫೈಪೋಟಿ ಶುರುವಾಗಿದೆ. ಜಗದೀಶ್ ಶೆಟ್ಟರ್ ಆಪ್ತ ತಿಪ್ಪಣ್ಣ ಮಜ್ಜಗಿ, ಬೆಲ್ಲದ ಬೆಂಬಲಿಗ ರಾಮಣ್ಣ ಬಡಿಗೇರ್, ಕೇಂದ್ರ ಸಚಿವ ಹಾಗೂ ಸಂಸದ ಪ್ರಲ್ಹಾದ್ ಜೋಶಿಯ ಪರಮಾಪ್ತ ಶಿಷ್ಯ ವಿರೇಶ ಅಂಟಚಟಗೇರಿ ಮಧ್ಯೆ ಪೈಪೋಟಿ ಶುರುವಾಗಿದೆ. ಹೀಗಾಗಿ ಶಾಸಕರಾದ ಬೆಲ್ಲದ್, ಶೆಟ್ಟರ್ ಯಾರಿಗೆ ಮೇಯರ್ ಮಾಡ್ತಾರೆ ಅನ್ನೋದು ಕುತೊಹಲ ಮೂಡಿಸಿದ್ರೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಯಾರಿಗೆ ಕೃಪೆ ತೋರಲಿದ್ದಾರೆ ಅನ್ನೋದು ಮಾತ್ರ ಸಸ್ಪೇನ್ಸ್ ಆಗಿದೆ.
ಇನ್ನೂ ರಾಜ್ಯ ಸರ್ಕಾರ ಪಾಲಿಕೆಯ ಉಪ ಮೇಯರ್ ಸ್ಥಾನವನ್ನ ಪರಿಶಿಷ್ಟ ವರ್ಗ ಮಹಿಳೆಗೆ ಮೀಸಲಿರಿಸಿದ್ದು. ಚುನಾವಣೆಯಲ್ಲಿ ಗೆಲವು ಸಾಧಿಸಿದ ನಾಲ್ವರು ಸದಸ್ಯರಿದ್ದಾರೆ. ಆದರೆ, ನಾಲ್ವರಲ್ಲಿ ಯಾರೂ ಬಿಜೆಪಿ ಸದಸ್ಯರಿಲ್ಲದಿರುವುದು ಬಿಜೆಪಿಗೆ ಹಿನ್ನಡೆಯಾಗಿದೆ. ಮೀಸಲಾತಿ ಪ್ರಕಾರ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳಿದ್ದು, ಇನ್ನಿಬ್ಬರು ಪಕ್ಷೇತರರಿದ್ದಾರೆ. ಆದರೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ, ಪಕ್ಷೇತರರಾಗಿ ಸ್ಪರ್ದೆ ಮಾಡಿ ಗೆಲುವು ಸಾಧಿಸಿರುವ ದುರ್ಗಮ್ಮ ಶಶಿಕಾಂತ ಬಿಜವಾಡ ಮರಳಿ ಬಿಜೆಪಿಗೆ ಬಂದರೇ ಉಪಮೇಯರ ಸ್ಥಾನ ದುರ್ಗಮ್ಮ ಬಿಜವಾಡರಿಗೆ ಒಲಿಯುವ ಸಾಧ್ಯತೆಗಳಿವೆ. ಅಲ್ಲದೆ ಮೇಯರ್ - ಉಪಮೇಯರ್ ಸ್ಥಾನದ ವಿಚಾರದಲ್ಲಿ ಶೆಟ್ಟರ್-ಬೆಲ್ಲದ ಮಧ್ಯೆ ಮತ್ತಷ್ಟು ತಿಕ್ಕಾಟ ಮುನಿಸು ಆದ್ರೂ ಆಶ್ಚರ್ಯ ಪಡಬೇಕಾಗಿಲ್ಲ. ಹೀಗಾಗಿ ಮೇಯರ್ ಉಪಮೇಯರ್ ಆಯ್ಕೆಯಲ್ಲಿ ಸಿಎಂ ಬೊಮ್ಮಾಯಿ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಯಾರಿಗೆ ಕೃಪೆ ತೋರಲಿದ್ದಾರೆ ಅನ್ನೋದು ಇದೀಗ ತೀವ್ರ ಕುತೊಹಲ ಮೂಡಿಸಿದೆ.
Kshetra Samachara
08/09/2021 01:16 pm