ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಾರ್ಡ್ ನಂಬರ್ 28ರಿಂದ ಬಿಜೆಪಿಯ ಅಭ್ಯರ್ಥಿ ಚಂದ್ರಶೇಖರ ಮಲ್ಲಪ್ಪ ಮನಗುಂಡಿ 2,313 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಚನ್ನಪ್ಪ ಮಾಳಗಿ 1,195 ಮತಗಳನ್ನು ಹಾಗೂ ಜೆಡಿಎಸ್ ಅಭ್ಯರ್ಥಿ ಬಸವರಾಜ ಮೆಣಿಸಿಂಡಿ 238 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಹಾಲಶಾಂತಗೌಡ ಪಾಟೀಲ 57, ಮೌಲಾಲಿ ಮಹ್ಮದನವರ 161, ವಿಜಯಕುಮಾರ್ ಅಪ್ಪಾಜಿ 1030, ಶಹಜಾನ ಹು ಸಾವಂತನವರ 425, ಸೂರಜ ತಂದೆ ಬಾಬುಗೌಡ 165 ಮತಗಳನ್ನು ಪಡೆದಿದ್ದಾರೆ. ಒಟ್ಟು 5,666 ಮತಗಳು ಚಲಾವಣೆಯಾಗಿದ್ದು, 79 ಮತಗಳು ನೋಟಾ ಆಗಿವೆ. 3 ಮತಗಳು ತಿರಸ್ಕೃತವಾಗಿವೆ. 5574 ಮತಗಳು ಸಿಂಧು ಆಗಿವೆ.
Kshetra Samachara
06/09/2021 11:05 am