ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿಂದು ವಾರ್ಡ್ ನಂ.61 ರ ಬೂತ್ ನಂ 3 ರಲ್ಲಿ ಮತದಾರರ ಪಟ್ಟಿಯಲ್ಲಿ ದೋಷ ಕಂಡುಬಂದಿರುವುದನ್ನು ಖಂಡಿಸಿ, ಅಧಿಕಾರಿಗಳ ವಿರುದ್ಧ ಮತದಾರರು ಗರಂ ಆಗಿದ್ದಾರೆ.
ಮತದಾರರ ಪಟ್ಟಿಯಲ್ಲಿ ಸದ್ಯ ಇರುವ 520 ಹೆಸರುಗಳಲ್ಲಿ ದೋಷವಾಗಿದ್ದು, ತೀರಿ ಹೋದವರು ಹಾಗೂ ದೋಷವಿರುವ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರ್ಪಡಿಸಲಾಗಿದೆ ಎಂದು ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಬೂತ್ ನಲ್ಲಿ ತಳಮಳ ಸೃಷ್ಟಿಯಾಯಿತು. ನಂತರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಮತ್ತು ಮತದಾರರ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು. ಹಾಗೇಯೆ ಘಟನಾ ಸ್ಥಳಕ್ಕೆ ಬಂದ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಇದೊಂದು ರಾಜಕೀಯ ಕುತಂತ್ರ. ಬಿಜೆಪಿ ಪಕ್ಷದವರು ಓಟ್ ಬ್ಯಾಂಕ್ ಛಿಧ್ರಗೊಳಿಸಲು ಮಾಡಿರುವ ಸಂಚು ಎಂದು ಆರೋಪಿಸಿದರು.
ನಂತರ ಏರಿಯಾದಲ್ಲಿ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಮನೆಯನ್ನು ವೀಕ್ಷಣೆ ಮಾಡಿ ಈ ಸಮಸ್ಯೆಗೆ ಯಾವುದಾರೊಂದು ವ್ಯವಸ್ಥೆ ಮಾಡುತ್ತೆವೆ ಎಂದು ತಿಳಿಸಿದರು.
ವಾರ್ಡ್ ನಂ. 61 ನೇ ಮತದಾರರು ನಮಗೆ ಮತ ಹಾಕಲು ಅಚಕಾಶ ಮಾಡಿ ಕೊಡದಿದ್ದರೆ. ಈ ವಾರ್ಡ್ ಚುನಾವಣೆಯನ್ನು ಮುಂದೂಡಬೇಕೆಂದು ಆಗ್ರಹಿಸಿದರು....
Kshetra Samachara
03/09/2021 12:50 pm