ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ : ಸೆಪ್ಟೆಂಬರ್ 3 ರಂದು ನಡೆಯಲಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಹಿನ್ನೆಲೆ ಗುರುವಾರ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಧಾರವಾಡದಲ್ಲಿನ ಬಾಸೆಲ್ ಮಿಷನ್ ಶಾಲೆಯ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇನ್ನು ಸೆಪ್ಟೆಂಬರ್ 3 ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲೆಯ ವಿವಿಧ ತಾಲೂಕುಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನೇಮಿಸಲಾಗಿದ್ದು, ಪಾಲಿಕೆ ಚುನಾವಣೆಗಾಗಿ ಮತಯಂತ್ರಗಳ ಮಸ್ಟರಿಂಗ್ ಮಾಡುವ ಕಾರ್ಯವು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆ ಮತ್ತು ಪಾಲಿಟೆಕ್ನಿಕ್ ಕಾಲೇಜ್ ಹಾಗೂ ಧಾರವಾಡದ ಬಾಸೆಲ್ ಮಿಷನ್ ಶಾಲೆಗಳಲ್ಲಿ ನಡೆಯಲಿದೆ. ಈ ಹಿನ್ನೆಲೆ ಇಂದು ಧಾರವಾಡದ ಬಾಸೆಲ್ ಮಿಷನ್ ಶಾಲೆಯ ಆವರಣದಲ್ಲಿ ವಿವಿಧ ತಾಲೂಕುಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಇನ್ನು ನಾಳೆ 82 ವಾರ್ಡಗಳಿಗೆ ಮತದಾನ ನಡೆಯಲಿದ್ದು, ಧಾರವಾಡದ ಬಾಶೆಲ್ ಮಿಶನ್ ಶಾಲೆಯಲ್ಲಿ 25 ವಾರ್ಡಗಳಲ್ಲಿ ಮಸ್ಟರಿಂಗ್ ಇದೆ. ಒಟ್ಟು 842 ಮತಗಟ್ಡೆಗಳನ್ನ ಗುರುತಿಸಲಾಗಿದ್ದು, ಹೈಪರ್ ಸೆನ್ ಸಿಟಿವ್ 108 ಮತಗಟ್ಟೆಗಳಿವೆ. 175 ಕ್ಕೂ ಹೆಚ್ಚು ಸರಕಾರಿ ಬಸ್ ಗಳನ್ನು ಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.

Edited By : Shivu K
Kshetra Samachara

Kshetra Samachara

02/09/2021 12:35 pm

Cinque Terre

74.05 K

Cinque Terre

1

ಸಂಬಂಧಿತ ಸುದ್ದಿ