ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ನಡೆದಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಂಡಿರುವ ಮಂಜುನಾಥ ನಡಟ್ಟಿ ಅವರು ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ಚುನಾವಣೆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಪಕ್ಷದ ವಿರುದ್ಧ ನಡೆದುಕೊಂಡಿದ್ದಾರೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷರೂ ಆಗಿರುವ ಶಾಸಕ ಅರವಿಂದ ಬೆಲ್ಲದ ಅವರು ಧಾರವಾಡದ ಮೂರನೇ ವಾರ್ಡಿನ ಮಂಜುನಾಥ ನಡಟ್ಟಿ ಸೇರಿದಂತೆ 30 ಮಂದಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಹೀಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ ನಡಟ್ಟಿ ಅವರು ತಮ್ಮ ಮನೆಯ ಮೇಲೆ ಕಟ್ಟಿದ್ದ ಬಿಜೆಪಿ ಪಕ್ಷದ ಧ್ವಜವನ್ನು ಬಿಚ್ಚಿ ಕಣ್ಣೀರಿಟ್ಟಿದ್ದಾರೆ.
ತಮ್ಮ ಮನೆಯ ಮೇಲೆ ಇನ್ನೂ ಬಿಜೆಪಿ ಬಾವುಟ ಇರುವುದರಿಂದ ತಾವು ಬಿಜೆಪಿಯಲ್ಲೇ ಮುಂದುವರೆಯುತ್ತಿರುವುದಾಗಿ ಬಿಜೆಪಿ ನಾಯಕರಿಗೆ ಮುಜುಗರ ಉಂಟಾಗಬಾರದು ಎಂದು ಪಕ್ಷದ ಬಾವುಟ ತೆಗೆದು ಹಾಕಿದ್ದೇನೆ ಎಂದು ಮಂಜುನಾಥ ಕಣ್ಣೀರು ಹಾಕಿದ್ದಾರೆ.
Kshetra Samachara
01/09/2021 12:33 pm