ಧಾರವಾಡ: ಧಾರವಾಡದ ವಾರ್ಡ್ ನಂಬರ್ 15 ರಿಂದ ಚುನಾವಾಣಾ ಕಣಕ್ಕಿಳಿದಿರುವ ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ ಅವರ ಪುತ್ರ ಅನಿರುದ್ಧ ಚಿಂಚೋರೆ ಅವರು ಪ್ರಚಾರಕ್ಕೆಂದು ಹೋಗಿದ್ದ ಸಂದರ್ಭದಲ್ಲಿ, ಜನ ತಮಗಿರುವ ಸಮಸ್ಯೆಗಳನ್ನು ಹೇಳಿಕೊಂಡ ಘಟನೆ ನಡೆದಿದೆ.
ವಾರ್ಡ್‌ನಲ್ಲಿ ಸಾಕಷ್ಟು ತೊಂದರೆ ಇದ್ದು, ಮಳೆ ಬಂದರೆ ಕೆಲವು ಕಡೆಗಳಲ್ಲಿ ನೀರು ನುಗ್ಗುತ್ತದೆ. ತಾವು ಚುನಾಯಿತರಾದರೆ ಈ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಜನ ಅನಿರುದ್ಧ ಚಿಂಚೋರೆ ಅವರಲ್ಲಿ ಮನವಿ ಮಾಡಿದ್ದಾರೆ. ಜನರ ಸಮಸ್ಯೆಗಳನ್ನು ಸಮಾಧಾನದಿಂದ ಕೇಳಿದ ಅನಿರುದ್ಧ, ಪಾಲಿಕೆ ಸದಸ್ಯನಾಗಿ ನಾನು ಆಯ್ಕೆ ಆದಿದ್ದೇ ಆದಲ್ಲಿ ವಾರ್ಡ್‌ನ್ನು ಮಾದರಿ ವಾರ್ಡ್ ಆಗಿ ಮಾಡಿ ತೋರಿಸುತ್ತೇನೆ ಎಂದಿದ್ದಾರೆ.
ಇನ್ನೇನು ಸೆ.3ಕ್ಕೆ ಮತದಾನ ನಡೆಯಲಿದ್ದು, ಎಲ್ಲರೂ ಮತದಾನ ಮಾಡಿ 15ನೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಅನಿರುದ್ಧ ಅವರು ಮತದಾರರಲ್ಲಿ ಮನವಿ ಮಾಡಿದರು. ಈಗಾಗಲೇ ವಾರ್ಡ್ ನಂಬರ್ 15ರ ಜಯನಗರ, ಮಾಳಮಡ್ಡಿ, ಗೋಪಾಲಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಅನಿರುದ್ಧ ಅವರು ಬಿರುಸಿನ ಪ್ರಚಾರ ಮಾಡಿ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದರು.
Kshetra Samachara
30/08/2021 08:58 pm