ಧಾರವಾಡ: ಶಿವಕಿರಣ ರಾಮಪ್ಪ ಅಗಡಿ.. ವೃತ್ತಿಯಿಂದ ಡಿಪ್ಲೋಮಾ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದವರು. ಅಲ್ಲದೇ ಬಿಬಿಎ ಮುಗಿಸಿ ಮಾರ್ಕೇಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಶಿವಕಿರಣ, ಸಮಾಜ ಸುಧಾರಣೆಗೆಂದು ವೃತ್ತಿ ತೊರೆದು ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದೆಹಲಿಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿ ಅಧಿಕಾರಕ್ಕೆ ಬಂದು ಸಾಕಷ್ಟು ಜನಪರ ಯೋಜನೆಗಳ ಮೂಲಕವೇ ಹೆಸರು ಗಳಿಸಿದ ಅರವಿಂದ್ ಕೇಜ್ರಿವಾಲ್ ಅವರ ಕಾರ್ಯವೈಖರಿಯೇ ಇವರಿಗೆ ಪ್ರೇರಣೆ. ಹೀಗಾಗಿಯೇ ಭ್ರಷ್ಟಾಚಾರ ಮುಕ್ತ ಅಧಿಕಾರ ನಡೆಸುವ ಉದ್ದೇಶದಿಂದ ಶಿವಕಿರಣ ಅಗಡಿ ಅವರು ಪ್ರಸಕ್ತ ವರ್ಷ ಧಾರವಾಡದ ವಾರ್ಡ್ ನಂಬರ್ 12 ರಿಂದ ಪಾಲಿಕೆ ಚುನಾವಣಾ ಕಣಕ್ಕಿಳಿದಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಆಮ್ ಆದ್ಮಿ ಪಕ್ಷದಲ್ಲಿದ್ದುಕೊಂಡು ಪಕ್ಷ ಸಂಘಟನೆ ಮಾಡುತ್ತಿರುವ ಇವರು, ಚುನಾಯಿತ ಪ್ರತಿನಿಧಿ ಅಲ್ಲದಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದವರು. ಹೀಗಾಗಿಯೇ 12ನೇ ವಾರ್ಡಿನ ಜನತೆ ಪ್ರಸಕ್ತ ವರ್ಷ ಬದಲಾವಣೆ ಬಯಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತಿದ್ದು, ಆ ರಾಜ್ಯದಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿ ರಾಜ್ಯವನ್ನು ವಿಶ್ವದರ್ಜೆಯ ರಾಜ್ಯವನ್ನಾಗಿ ಮಾಡಿದ್ದಾರೆ. ಈಗ ಅದೇ ರೀತಿ ತಮ್ಮ ವಾರ್ಡ್‌ನ್ನು ಕೂಡ ಮಾದರಿ ವಾರ್ಡ್‌ನ್ನಾಗಿ ಮಾಡುವ ಕನಸು ಹೊತ್ತು ಶಿವಕಿರಣ ಅವರು ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ವಿಭಿನ್ನ ಹಾಗೂ ನೂತನ ಆಡಳಿತ ಹಾಗೂ ಜನಪರ ಯೋಜನೆಗಳನ್ನು ಜಾರಿಗೆ ತರುವ ಕನಸು ಆಮ್ ಆದ್ಮಿ ಪಕ್ಷದ್ದಾಗಿದೆ. ಈ ಪಕ್ಷದ ರಾಜಕಾರಣಿಗಳು ಭ್ರಷ್ಟಾಚಾರ ಮುಕ್ತರಾಗಿರಬೇಕು ಎಂಬ ನಿಯಮವಿದೆ. ಹೀಗಾಗಿಯೇ ಪಕ್ಷದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ವಿಭಿನ್ನ ಮಾದರಿ ಅಭಿವೃದ್ಧಿ ಮಾಡಬೇಕೆಂಬ ಕನಸನ್ನು ಶಿವಕಿರಣ ಹೊಂದಿದ್ದಾರೆ. ತಮ್ಮ ಕನಸಿನ ವಾರ್ಡ್ ಹೇಗಿರಬೇಕು ಎಂಬುದರ ಬಗ್ಗೆ ಶಿವಕಿರಣ ಅಗಡಿ ಅವರೇ ಹೇಳಿದ್ದಾರೆ ಕೇಳಿ.
ಸರ್ಕಾರಿ ಶಾಲೆಗಳನ್ನು ವಿಶ್ವದರ್ಜೆಗೆ ಏರಿಸುವುದು, ವಿಶ್ವದರ್ಜೆಯ ಸರ್ಕಾರಿ ಆಸ್ಪತ್ರೆ ನಿರ್ಮಾಣ, ಗುಂಡಿ, ಧೂಳು ರಹಿತ ರಸ್ತೆ ನಿರ್ಮಾಣ, ಕಾಲಮಿತಿಯೊಳಗೆ ಜನರ ಮನೆ ಬಾಗಿಲಿಗೆ ಸೌಲಭ್ಯ, ವಿಶ್ವದರ್ಜೆಯ ಕೆರೆಗಳ ನಿರ್ಮಾಣ, ವಾರ್ಡಿನಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ, ಉತ್ತಮ ಶೌಚಾಲಯಗಳ ನಿರ್ಮಾಣ, ಸ್ವಚ್ಛ ಹಾಗೂ ಶುದ್ಧ ಕುಡಿಯುವ ನೀರು, ಸಮರ್ಪಕ ವಿದ್ಯುತ್, ವಾರ್ಡ್‌ಗೆ ಮೂಲಭೂತ ಸೌಕರ್ಯ, ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳದಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುವ ಉದ್ದೇಶ ಶಿವಕಿರಣ ಅವರದ್ದಾಗಿದೆ.
ಈಗಾಗಲೇ ಶಿವಕಿರಣ ಅವರು 12 ನೇ ವಾರ್ಡಿನಲ್ಲಿ ಸಾಕಷ್ಟು ಪ್ರಚಾರ ಕಾರ್ಯ ನಡೆಸಿದ್ದು, ಆಮ್ ಆದ್ಮಿ ಪಕ್ಷದ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಸಾರ್ವನಿಕರು ಕೂಡ ಆಮ್ ಆದ್ಮಿ ಪಕ್ಷದತ್ತ ಒಲವು ತೋರಿದ್ದು, ಪ್ರಸಕ್ತ ವರ್ಷ ಬದಲಾವಣೆ ಬಯಸಿದ್ದಾರೆ. ಅಲ್ಲದೇ ಒಳ್ಳೆಯ ಪಕ್ಷಕ್ಕೆ ಹಾಗೂ ಭ್ರಷ್ಟಾಚಾರ ಎಂಬ ಕಸ ಗೂಡಿಸುವ ಪೊರಕೆ ಚಿನ್ಹೆಯ ಪಕ್ಷಕ್ಕೆ ಬೆಂಬಲ ಸೂಚಿಸುವುದಾಗಿಯೂ ಹೇಳುತ್ತಿದ್ದಾರೆ.
ಎಸ್.. ಆಮ್ ಆದ್ಮಿ ಪಕ್ಷ ಅಂದ್ರೇನೆ ಭ್ರಷ್ಟಾಚಾರ ಮುಕ್ತ ಪಕ್ಷ. ಈ ಪಕ್ಷದಲ್ಲಿರುವ ವಿಚಾರಗಳೇ ವಿಭಿನ್ನವಾಗಿವೆ. ಹೀಗಾಗಿಯೇ ಈ ಪಕ್ಷದ ಮಹತ್ವ ಅರಿತಿರುವ ದೆಹಲಿ ಜನತೆ ಈ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಅಲ್ಲಿನ ಆಡಳಿತ ಹಾಗೂ ಕಾರ್ಯವೈಖರಿಗೆ ಜನ ಕೂಡ ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. ಪ್ರಸಕ್ತ ವರ್ಷ ಪಾಲಿಕೆ ಚುನಾವಣೆಯಲ್ಲೂ ಕೂಡ ಆಮ್ ಆದ್ಮಿ ಪಕ್ಷ ಸಾಕಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಪ್ರಚಾರಕ್ಕೆಂದು ಹೋದ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಪಕ್ಷದ ಅಭ್ಯರ್ಥಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅವುಗಳನ್ನು ಬಗೆಹರಿಸಿಕೊಡುವುದಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪ್ರಸಕ್ತ ವರ್ಷ ವಾರ್ಡ್ ನಂಬರ್ 12ರಲ್ಲಿ ಬದಲಾವಣೆ ತರಬೇಕು ಎಂದು ಅಲ್ಲಿನ ಜನ ಅಪೇಕ್ಷೆ ಪಟ್ಟಿದ್ದಾರೆ. ಅಲ್ಲದೇ ಹಿರಿಯ ನಾಗರಿಕರು ಕೂಡ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ಸೂಚಿಸಿ ಅಭ್ಯರ್ಥಿಯೊಂದಿಗೆ ಮತಯಾಚನೆ ಕೂಡ ಮಾಡುತ್ತಿದ್ದಾರೆ. ಈಗಾಗಲೇ ಪಕ್ಷದ ಅಭ್ಯರ್ಥಿ ಶಿವಕಿರಣ ಅಗಡಿ ಅವರು ವಾರ್ಡ್‌ನಲ್ಲಿ ಬಿರುಸಿನ ಪ್ರಚಾರ ನಡೆಸಿ, ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ದೆಹಲಿ ಮಾದರಿಯಲ್ಲಿ ತಮ್ಮ ವಾರ್ಡ್‌ನ್ನು ಮಾಡಬೇಕು ಎಂದು ಕನಸು ಹೊತ್ತಿರುವ ಶಿವಕಿರಣ ಅವರಿಗೆ ಜಯ ಸಿಕ್ಕು ಅವರು ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂಬುದು ಅಲ್ಲಿನ ಜನರ ಆಶಯವಾಗಿದೆ.
Kshetra Samachara
30/08/2021 06:33 pm