ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಭಿವೃದ್ಧಿ ಅಸ್ತ್ರ ಮೂಲ ಸೌಕರ್ಯಗಳು ನಿಶ್ಚಿತ ಸೂರಜ್ ಕಾಯಕ ಶಾಶ್ವತ

ಧಾರವಾಡ: ಜಾತಿ ಧರ್ಮ ಮೇಲು ಕೀಳು ಎಲ್ಲವನ್ನೂ ಮರೆತು ಅಭಿವೃದ್ಧಿ, ಸೇವೆ, ಸಹಕಾರ, ಮೂಲ ಸೌಕರ್ಯ ಬೆಳಕಿನ ಛಾಯೆಯಲ್ಲಿ ವಜ್ರದ ಹುಡುಗ ಸೂರಜ್ ಪುಡಕಲಕಟ್ಟಿ ವಾರ್ಡ್ ನಂಬರ್ 5 ರಲ್ಲಿ ಭರ್ಜರಿ ಪ್ರಚಾರದಲ್ಲಿದ್ದಾರೆ.

ಹೌದು ! ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣೆಗೆ ಧಾರವಾಡದ ವಾರ್ಡ್ 5 ರಿಂದ ಸ್ಪರ್ಧಿಸಿದ ಸೂರಜ್ ಪುಡಕಲಕಟ್ಟಿ ಕಳೆದ ಮೂರು ವರ್ಷಗಳಿಂದ ಜನರಿಗೆ ಕಲ್ಪಿಸಿದ ಅಭಿವೃದ್ಧಿ ಸೇವೆಯ ಮೇಲೆ ಈ ಬಾರಿ ರಾಜಕೀಯಕ್ಕೆ ಧುಮುಕಿದ್ದು ಅದರಂತೆ ಭರದ ಪ್ರಚಾರದಲ್ಲಿ ಪ್ರತಿಯೊಬ್ಬರ ಮನೆ ತಲುಪಿ ಶಿರಭಾಗಿ ಹೊಸ ಅಭಿವೃದ್ಧಿ ಪರ್ವಕ್ಕೆ ಅವಕಾಶ ಕೇಳುತ್ತಿದ್ದಾರೆ.

ವಾರ್ಡ್ ನಂಬರ್ 5ರಲ್ಲಿ ವೃದ್ಧರೂ, ಅಂಗವಿಕಲರು, ಬಡವರು, ಮೂಲ ಸೌಕರ್ಯಗಳಿಂದ ವಂಚಿತರಾದವರನ್ನೆ ಮುಖ್ಯವಾಗಿ ಅಭಿವೃದ್ಧಿ ಮಾಡ್ಬೇಕು ಎಂಬ ಗುರಿಯನ್ನು ಬೆನ್ನಟ್ಟಿದ ಸೂರಜ್ ಪಕ್ಷೇತರ ಅಭ್ಯರ್ಥಿಯಾಗಿ ವಾರ್ಡ್ ನಂಬರ್ 5ರಲ್ಲಿ ಅದ್ದೂರಿ ಪ್ರಚಾರ ನಡೆಸಿದ್ದು ಕುಟುಂಬ ವರ್ಗ, ಸ್ನೇಹಿತರ ಬಳಗ, ಎಲ್ಲದಕ್ಕಿಂತ ವಿಶೇಷವಾಗಿ ವಾರ್ಡ್ ನಂಬರ್ 5ರ ಹಿರಿಯರ ಆರ್ಶಿವಾದ ಈ ಭಾರಿ ಸೂರಜ್ ಪುಡಕಲಕಟ್ಟಿ ಅಭಿವೃದ್ಧಿ ಓಟಕ್ಕೆ ವಿಜಯ ತಂದು ಕೊಡುವ ವಾತಾವರಣದ ಕಳೆ ಎಲ್ಲೇಡೆ ಭಾಸವಾಗುತ್ತಿದೆ.

ಸಧ್ಯ ವಾರ್ಡ್ ನಂಬರ್ 5ರ ಮನೆ ಮನೆ ತಲುಪುತ್ತಿರುವ ಸೂರಜ್ ಈಗಾಗಲೇ ತನ್ನ ನಿಷ್ಪಕ್ಷಪಾತ ಕಾಯಕದ ಮೂಲಕ ಜನರ ಮನಸ್ಸನ್ನು ಗೆದ್ದಿದ್ದು ಈಗ ಚುನಾವಣೆ ಎದುರಿಸೋದೊಂದೆ ಬಾಕಿ ಇದೆ.

Edited By : Nagesh Gaonkar
Kshetra Samachara

Kshetra Samachara

30/08/2021 03:53 pm

Cinque Terre

43.39 K

Cinque Terre

4

ಸಂಬಂಧಿತ ಸುದ್ದಿ