ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 63ನೇ ವಾರ್ಡಿನಲ್ಲಿ ಕಮಲ ಪಡೆಯ ಜನನಾಯಕ ಮಲ್ಲಪ್ಪ ಶಿರಕೋಳ: ಎಲ್ಲೆಡೆಯೂ ಜನ ಬೆಂಬಲ...!

ಹುಬ್ಬಳ್ಳಿ: ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಜನರ ಕಷ್ಟ ಬಗೆಹರಿಸಲು ವಾಣಿಜ್ಯನಗರಿ ಹುಬ್ಬಳ್ಳಿಯ ವಾರ್ಡ್ ನಂಬರ 63ರಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧೆಗೆ ಇಳಿದ ಮಲ್ಲಪ್ಪ ಶಿರಕೋಳ ಅವರು ವಾರ್ಡ್ ನಂಬರ 63ರಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಈಗಾಗಲೇ ಸ್ಥಳೀಯವಾಗಿ ಸಾಕಷ್ಟು ಸಾರ್ವಜನಿಕ ಸಮಸ್ಯೆಗಳನ್ನು ಗಮನಿಸಿರುವ ಜನನಾಯಕ ಮಲ್ಲಪ್ಪ ಶಿರಕೋಳ ಅವರಿಗೆ ಜನರು ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ. ಈ ಹಿಂದೇ ಕೂಡ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ ಮಲ್ಲಪ್ಪ ಶಿರಕೋಳ ಅವರು ಜನ ಮೆಚ್ಚಿದ ಜನನಾಯಕ ಎಂದೇ ಖ್ಯಾತಿ ಪಡೆದಿದ್ದಾರೆ.

ಈಗಾಗಲೇ ವಾರ್ಡ್ ನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದು, ಜನರ ಮೂಲಭೂತ ಸೌಕರ್ಯಗಳ ಸಮಸ್ಯೆ ಹಾಗೂ ಯಾವುದೇ ಸಮಸ್ಯೆಗಳಿಗೂ ಕೂಡಲೇ ಸ್ಪಂದಿಸುವ ವ್ಯಕ್ತಿತ್ವವನ್ನು ಹೊಂದಿರುವ ಮಲ್ಲಪ್ಪ ಶಿರಕೋಳ ಅವರನ್ನು ಜನರು ಈ ಬಾರಿ ಪ್ರಚಂಡ ಬಹುಮತದಿಂದ ಆಯ್ಕೆಮಾಡುವ ಭರವಸೆ ನೀಡಿದ್ದಾರೆ. ಈಗಾಗಲೇ ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನನಾಯಕನಿಗೆ ಒಂದು ಅವಕಾಶ ಕೊಡಲು ಜನರು ಸಿದ್ಧರಾಗಿದ್ದಾರೆ.

ಒಟ್ಟಿನಲ್ಲಿ ಭಾರತೀಯ ಜನತಾ ಪಕ್ಷದ ಮೂಲಕ ಸಾರ್ವಜನಿಕ ಸೇವೆಗೆ ಸಿದ್ಧರಾಗಿರುವ ಮಲ್ಲಪ್ಪ ಶಿರಕೋಳ ಜನ ಸೇವೆ ಮಾಡಲು ಒಂದು ಅವಕಾಶ ಕೋರಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

28/08/2021 10:29 pm

Cinque Terre

49.98 K

Cinque Terre

1

ಸಂಬಂಧಿತ ಸುದ್ದಿ