ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ತಿಪ್ಪಣ್ಣ ಮಜ್ಜಿಗಿಯವರ ಬಿರುಸಿನ ಪ್ರಚಾರ: ಎಲ್ಲೆಡೆಯೂ ಕಮಲ ಪಡೆಗೆ ಉತ್ತಮ ಬೆಂಬಲ...!

ಹುಬ್ಬಳ್ಳಿ: ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ 38ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ತಿಪ್ಪಣ್ಣ ಮಜ್ಜಿಗಿಯವರು ಬಿರುಸಿನ ಪ್ರಚಾರ ನಡೆಸಿದ್ದಾರೆ.

ಹೌದು.. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಜನನಾಯಕ ತಿಪ್ಪಣ್ಣ ಮಜ್ಜಿಗಿಯವರಿಗೆ ಎಲ್ಲೆಡೆಯೂ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿಗೆ ಜನರು ಆಶೀರ್ವಾದ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನೂ ಎಲ್ಲೆಡೆಯೂ ಭಾರತೀಯ ಜನತಾ ಪಕ್ಷದ ಬಗ್ಗೆ ಜನರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಜನರಲ್ಲಿ ತಿಪ್ಪಣ್ಣ ಮಜ್ಜಿಗಿಯವರ ಅಭಿವೃದ್ಧಿ ಕಾರ್ಯಗಳೇ ಮನಸ್ಸಿನಲ್ಲಿ ಉಳಿದಿವೆ.

ಮಾಜಿ ಮೇಯರ್ ಅಶ್ವಿನಿ ಮಜ್ಜಿಗಿಯವರ ನೇತೃತ್ವದಲ್ಲಿ ನಡೆದ ಅವಳಿನಗರದ ಅಭಿವೃದ್ಧಿಗೆ ಜನರು ಸ್ಪಂದಿಸಿದ್ದು, ಈ ಬಾರಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ತಿಪ್ಪಣ್ಣ ಮಜ್ಜಿಗಿಯವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವ ಭರವಸೆ ನೀಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

28/08/2021 10:10 pm

Cinque Terre

41.35 K

Cinque Terre

0

ಸಂಬಂಧಿತ ಸುದ್ದಿ