ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ ನಂಬರ್ 15 ರಿಂದ ಚುನಾವಣಾ ಕಣಕ್ಕಿಳಿದಿರುವ ದೀಪಕ ಚಿಂಚೋರೆ ಅವರ ಪುತ್ರ ಅನಿರುದ್ಧ ಚಿಂಚೋರೆ ಪರ ಬಿರುಸಿನ ಪ್ರಚಾರ ನಡೆಯುತ್ತಿದೆ.
ವಾರ್ಡ್ ನಂಬರ್ 15 ರ ವ್ಯಾಪ್ತಿಗೆ ಬರುವ ಮಾಳಮಡ್ಡಿ, ಗೋಪಾಲಪುರ, ಜಯನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಅನಿರುದ್ಧ ಚಿಂಚೋರೆ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಲಾಗುತ್ತಿದೆ.
ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸ್ವತಃ ಅನಿರುದ್ಧ ಅವರ ತಾಯಿ ಹಾಗೂ ಪತ್ನಿ ಕೂಡ ಪ್ರಚಾರಕ್ಕಿಳಿದಿದ್ದು, ಅನಿರುದ್ಧ ಅವರಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಒಂದೆಡೆ ಅನಿರುದ್ಧ ಅವರ ತಾಯಿ ಹಾಗೂ ಪತ್ನಿ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಅನಿರುದ್ಧ ಅವರು ಮತಯಾಚನೆ ಮಾಡುತ್ತಿದ್ದಾರೆ. ವಾರ್ಡ್ ನಂಬರ್ 15 ಅನಿರುದ್ಧ ಅವರ ಸ್ಪರ್ಧೆಯಿಂದ ರಂಗು ಪಡೆದುಕೊಂಡಿದ್ದು, 40 ವರ್ಷಗಳ ನಂತರ ಈ ವಾರ್ಡಿನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
Kshetra Samachara
27/08/2021 10:25 am