ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಾದರಿ ವಾರ್ಡ್‌ ಮಾಡುವ ಪಣ ತೊಟ್ಟ ದೀಪಾ ನೀರಲಕಟ್ಟಿ

ದೀಪಾ ನೀರಲಕಟ್ಟಿ. ಯುವ ಉತ್ಸಾಹಿ ನಾಯಕಿ. ತನ್ನ ವಾರ್ಡಿಗೆ ಏನಾದರೊಂದು ಹೊಸದನ್ನು ಮಾಡಲೇಬೇಕೆಂಬ ತುಡಿತ. ಅಧಿಕಾರ ಸಿಕ್ಕರೆ ವಾರ್ಡಿನ ಚಿತ್ರಣವನ್ನೇ ಬದಲಿಸಿ ಜನರ ಸೇವೆ ಮಾಡಬೇಕೆಂಬ ಮಹಾದಾಸೆ ಹೊಂದಿ 'ಕೈ' ಹಿಡಿದು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಧಾರವಾಡದ ಏಳನೇ ವಾರ್ಡಿನಿಂದ ಚುನಾವಣಾ ಅಖಾಡಕ್ಕೆ ಧುಮಿಕಿರುವ ದೀಪಾ ಅವರ ಪತಿ ಸಂತೋಷ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಕಟ್ಟಾ ಬೆಂಬಲಿಗ. ಹಣ ಬಲ ಇಲ್ಲದಿದ್ದರೂ ಇವರ ಪಕ್ಷ ನಿಷ್ಠೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ನೋಡಿ ಕಾಂಗ್ರೆಸ್ ಇದೀಗ ಸಂತೋಷ ನೀರಲಕಟ್ಟಿ ಅವರ ಪತ್ನಿ ದೀಪಾ ನೀರಲಕಟ್ಟಿ ಅವರಿಗೆ ಟಿಕೆಟ್ ನೀಡಿ ಚುನಾವಣಾ ಅಖಾಡಕ್ಕೆ ಇಳಿಸಿದೆ. ಏಳನೇ ವಾರ್ಡಿನಲ್ಲಿ ವಿನಯ್ ಕುಲಕರ್ಣಿ ಅವರ ಅಭಿಮಾನಿಗಳ ದಂಡೇ ಇದೆ. ಹೀಗಾಗಿ ಪ್ರಸಕ್ತ ವರ್ಷ ದೀಪಾ ನೀರಲಕಟ್ಟಿ ಅವರ ಗೆಲುವು ಕಟ್ಟಿಟ್ಟ ಬುತ್ತಿ ಎಂದೇ ಹೇಳಲಾಗುತ್ತಿದೆ.

ದೀಪಾ ನೀರಲಕಟ್ಟಿ ಅವರದ್ದು ಮೂಲತಃ ಕೃಷಿ ಕುಟುಂಬ. ಇವರ ಪತಿ ಸಂತೋಷ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಸಾಕಷ್ಟು ಸಾಮಾಜಿಕ ಕೆಲಸ ಮಾಡಿದವರು. ಹಣ ಬಲ ಇಲ್ಲದಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಹನಾ ಗುಣ ಇವರದ್ದು. ಹೀಗಾಗಿಯೇ ಸಂತೋಷ ಅವರ ಸ್ನೇಹಿತರು ಹಾಗೂ ವಾರ್ಡಿನ ಪ್ರಮುಖರು ಹಣ ಹೊಂದಿಸಿ ಇವರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಇದನ್ನು ನೋಡಿದರೆ, ಜನ ಇವರ ಮೇಲೆ ಎಷ್ಟೊಂದು ಅಭಿಮಾನ ಹಾಗೂ ಪ್ರೀತಿ ಹೊಂದಿದ್ದಾರೆ ಎಂಬುದು ಗೊತ್ತಾಗುತ್ತದೆ. ತಮ್ಮ ವಾರ್ಡು ಹೇಗಿರಬೇಕು ಎಂದು ಸ್ವತಃ ಕಾಂಗ್ರೆಸ್ ಅಭ್ಯರ್ಥಿ ದೀಪಾ ನೀರಲಕಟ್ಟಿ ಅವರೇ ಹೇಳ್ತಾರೆ ಕೇಳಿ.

ಈ ಹಿಂದೆ ಪಾಲಿಕೆ ಸದಸ್ಯರಾಗಿ ಸಾಕಷ್ಟು ಕೆಲಸ ಮಾಡಿದ ಸರೋಜಾ ಪಾಟೀಲ ಅವರ ಬೆಂಬಲ ಕೂಡ ದೀಪಾ ನೀರಲಕಟ್ಟಿ ಅವರಿಗಿದೆ. ಸರೋಜಾ ಪಾಟೀಲ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದರಿಂದಲೇ ಇದೀಗ ದೀಪಾ ಅವರಿಗೆ ದೊಡ್ಡಮಟ್ಟದಲ್ಲಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಸ್ವತಃ ಸರೋಜಾ ಪಾಟೀಲ ಅವರೇ ದೀಪಾ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಇತ್ತ ಕಾಂಗ್ರೆಸ್ ಮುಖಂಡ ಶಿವಶಂಕರ ಹಂಪಣ್ಣವರ ಕೂಡ ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತ. ಹೀಗಾಗಿ ಸ್ವತಃ ಹಂಪಣ್ಣವರ ಅವರೇ ದೀಪಾ ನೀರಲಕಟ್ಟಿ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಮುತುವರ್ಜಿ ವಹಿಸಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರ ಬೆಂಬಲ ದೀಪಾ ಅವರಿಗೆ ಸಿಕ್ಕಿದ್ದು. ದೀಪಾ ಅವರು ವಿಜಯದ ಮಾಲೆ ಹಾಕಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ.

ನೀರಲಕಟ್ಟಿ ಕುಟುಂಬಕ್ಕೆ ಹಣ ಬಲವಿಲ್ಲದಿದ್ದರೂ ಜನ ಬಲ ಮಾತ್ರ ಸಾಕಷ್ಟಿದೆ. ಸಂತೋಷ ಅವರ ಸ್ನೇಹಿತರು ಹಾಗೂ ವಾರ್ಡಿನ ಮತದಾರರು ಕೂಡಿಕೊಂಡು ಈ ಚುನಾವಣೆ ಮಾಡುತ್ತಿದ್ದು, ಚುನಾವಣೆಯಲ್ಲಿ ದೀಪಾ ವಿಜಯಶಾಲಿಯಾಗಿ ಬಂದು ತಮ್ಮ ವಾರ್ಡಿನ ಜನರ ಪ್ರಮುಖ ಸಮಸ್ಯೆಗಳಾದ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಿ ಜನಮನ್ನಣೆ ಗಳಿಸಲಿ ಎಂಬುದೇ ನಮ್ಮ ಹಾರೈಕೆ.

Edited By : Shivu K
Kshetra Samachara

Kshetra Samachara

25/08/2021 10:02 am

Cinque Terre

54.59 K

Cinque Terre

8

ಸಂಬಂಧಿತ ಸುದ್ದಿ