ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳು ಯಾರ ಮನೆಗೆ ಹೋದರು ಟಿಕೆಟ್ ಸಿಗುವುದಿಲ್ಲ. ಅದನ್ನು ಕೋರ್ ಕಮೀಟಿಯೇ ನಿರ್ಧಾರ ಮಾಡುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಕೆಟ್ ಪಡೆಯಲು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ದಂಡು ನಾಯಕರ ಮನೆ ಬಾಗಿಲಿಗೆ ಬರುತ್ತಿದೆ. ಆದರೆ ಯಾರ ಮನೆ ಬಾಗಿಲಿಗೆ ಹೋದರು ಟಿಕೆಟ್ ಸಿಗುವುದಿಲ್ಲ. ಟಿಕೆಟ್ ಹಂಚಿಕೆ ಕೋರ್ ಕಮೀಟಿಗೆ ಬಿಟ್ಟಿದ್ದು, ಪ್ರಬಲ ಅಭ್ಯರ್ಥಿ ಹಾಗೂ ಯಾರಿಗೆ ನಾಯಕತ್ವ ಗುಣ ಇದೆಯೋ ಅವರನ್ನು ಆಯ್ಕೆ ಮಾಡಿ ಟಿಕೆಟ್ ನೀಡುವ ಕಾರ್ಯವನ್ನು ಭಾರತೀಯ ಜನತಾ ಪಕ್ಷದ ಮುಖಂಡರು ಮಾಡಲಿದ್ದಾರೆ ಎಂದು ಅವರು ಹೇಳಿದರು.
Kshetra Samachara
17/08/2021 04:02 pm