ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯ

ಕಲಘಟಗಿ:‌ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ‌ ನೀಡುವಂತೆ ಲಿಂಗಾಯತ ಪಂಚಮಸಾಲಿ ಸಮಾಜದ ಕಾರ್ಯಕಾರಣಿ ಮಂಡಳಿಯ ಪೂರ್ವಸಿದ್ಧತೆ ಮತ್ತು ಆಪ್ತ ಸಮಾಲೋಚನಾ ಸಭೆಯಲ್ಲಿ ಒತ್ತಾಯಿಸಲಾಯಿತು.

ಕಲಘಟಗಿ ಪಟ್ಟಣದ ಗಾಂಧಿ ನಗರದಲ್ಲಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿ ಬಿ ಹೊನ್ನಳ್ಳಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರ 2 ಎ ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಯಲ್ಲಪ್ಪ ಉಳ್ಳಾಗಡ್ಡಿ,ಬಸವರಾಜ ದೊಡ್ಡಮನಿ,ಯಲ್ಲಪ್ಪ ಚೌರಗಿ,ಈಶ್ವರಪ್ಪ ಜಾಯನಗೌಡ,ನಿಂಗಪ್ಪ ಮುತ್ತಣ್ಣವರ,ಕುಬೇರಪ್ಪ ಕುಂದಗೋಳ ಹಾಗೂ ಪಂಚಮಸಾಲಿ ಸಮಾಜದ ಮುಖಂಡರು,ಪದಾಧಿಕಾರಿಗಳು ಇದ್ದರು.

Edited By : Shivu K
Kshetra Samachara

Kshetra Samachara

16/08/2021 04:46 pm

Cinque Terre

24.81 K

Cinque Terre

1

ಸಂಬಂಧಿತ ಸುದ್ದಿ