ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೋಟೊ ಪ್ರಚಾರ...ಚೆನ್ನಮ್ಮಳಿಗೆ ಮಾಡಿದ ಅಪಚಾರ

ಸ್ವಾತಂತ್ರ್ಯೋತ್ಸವವನ್ನು ಭಾನುವಾರ ಹುಬ್ಬಳ್ಳಿ ಧಾರವಾಡದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬ್ರಿಟೀಷರ ದಾಸ್ಯ ಸಂಕೋಲೆಯಿಂದ ದೇಶವನ್ನು ಬಿಡುಗಡೆ ಮಾಡಲು ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮಳ ಸಾಹಸ, ತ್ಯಾಗ ಬಲಿದಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಆದರೆ ರಾಜಕಾರಣಿಗಳು ಹಾಗೂ ಅವರ ಕುಟುಂಬದವರು ಚೆನ್ನಮ್ಮಳ ಆಶ್ವರೂಢ ಪುತ್ಥಳಿಯನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ದುರ್ದೈವದ ಸಂಗತಿ.

ತಮ್ಮ ಫೊಟೊಗಾಗಿ, ಪ್ರಚಾರಕ್ಕಾಗಿ ವೀರರಾಣಿಗೆ ಅಪಚಾರ ಮಾಡುತ್ತಿದ್ದೇವೆಂಬ ಕಲ್ಪನೆಯೂ ಇವರಿಗಿಲ್ಲ.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಪತ್ನಿ ಶ್ರೀಮತಿ ಶಿಲ್ಪಾ ಶೆಟ್ಟರ್ ತಮ್ಮ ಸ್ನೇಹಿತೆಯರೊಂದಿಗೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿರುವ ಚೆನ್ನಮ್ಮಳ ಆಶ್ವರೂಢ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ.

ಆದರೆ ಮಾಲಾರ್ಪಣೆಗೆ ಬಳಸಿದ ಏಣಿಯ ಮೇಲೆಯೇ ನಿಂತು ಫೋಟೊಗೆ ಫೋಸ್ ನೀಡಿದ್ದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ಮಾಲಾರ್ಪಣೆ ನಂತರ ಕೆಳಗಿಳಿದು ಇತರರೊಂದಿಗೆ ನಿಂತು ಪೋಸ್ ಕೊಟ್ಟಿದ್ದರೆ ಸಾಕಾಗಿತ್ತು. ಪುತ್ಥಳಿಗೆ ಏಣಿ ತಾಗಿರುವಾಗಲೇ ಅದರ ಮೇಲೆ ನಿಂತಿರುವುದು ಚೆನ್ನಮ್ಮಳಿಗೆ ಮಾಡಿದ ಅವಮಾನವೆಂದು ಪಬ್ಲಿಕ್ ನೆಕ್ಸ್ಟ್ ಓದುಗರೊಬ್ಬರು ಈ ಫೋಟೊ ಹಂಚಿಕೊಂಡು ನೋವು ವ್ಯಕ್ತಪಡಿಸಿದ್ದಾರೆ.

ಇದು ಎಲ್ಲರಿಗೂ ಅನ್ವಯ , ಪುತ್ಥಳಿಗೆ ಅಪಚಾರವಾಗದಂತೆ ನೋಡಿಕೊಳ್ಳಬೇಕು. ಅದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ.

Edited By :
Kshetra Samachara

Kshetra Samachara

16/08/2021 01:19 pm

Cinque Terre

16.48 K

Cinque Terre

5

ಸಂಬಂಧಿತ ಸುದ್ದಿ