ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಹಾದಾಯಿ ಹೋರಾಟದಿಂದಲೇ ನಾನು ಶಾಸಕನಾಗಿ ಈಗ ಸಚಿವನೂ ಆಗಿದ್ದೇನೆ

ಧಾರವಾಡ: ಮಹಾದಾಯಿ ಮತ್ತು ಕಳಸಾ, ಬಂಡೂರಿ ಮೂರು ರಾಜ್ಯಗಳ ಮಧ್ಯೆ ಸಮಸ್ಯೆ ಇದೆ. ಈಗಾಗಲೇ ಕಾನೂನಾತ್ಮಕ ಪ್ರಕ್ರಿಯೆ ಮುಂದುವರೆದಿದೆ. ಮಹಾದಾಯಿ ಹೋರಾಟದಿಂದಲೇ ನಾನು ಶಾಸಕನಾಗಿ ಈಗ ಸಚಿವನೂ ಆಗಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸಿಎಂ ಮತ್ತು ಶಾಸಕರ ಪ್ರಯತ್ನದಿಂದ 1,678 ಕೋಟಿ ಹಣವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಡಿಪಿಆರ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಿ.ಸಿ.ಪಾಟೀಲ, ಬಸವರಾಜ ಬೊಮ್ಮಾಯಿ, ಪ್ರಹ್ಲಾದ ಜೋಶಿ ಹಾಗೂ ನಾನು ಈ ಬಗ್ಗೆ ಹೋರಾಟ ಮಾಡಿದ್ದೇವೆ. ಆದಷ್ಟು ಬೇಗ ಕಳಸಾ ವಿವಾದವನ್ನು ಬಗೆಹರಿಸಲಾಗುವುದು. ನಾವು ಸುಖಾ ಸಮ್ಮನೆ ಹೇಳಿಕೆ ನೀಡುವುದಿಲ್ಲ. ಈಗ ಅದರ ಬಗ್ಗೆ ಚರ್ಚೆ ಬೇಡ. ಕಾನೂನಾತ್ಮಕವಾಗಿ ಹೋರಾಟ ಮಾಡೋಣ ಎಂದರು.

Edited By : Shivu K
Kshetra Samachara

Kshetra Samachara

15/08/2021 11:44 am

Cinque Terre

16.48 K

Cinque Terre

0

ಸಂಬಂಧಿತ ಸುದ್ದಿ