ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ದಾಖಲೆಯ ಬೃಹತ್ ರಾಷ್ಟ್ರ ಧ್ವಜದ ಮೆರವಣಿಗೆ ಸಿದ್ಧತೆ

ಕಲಘಟಗಿ: ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ಅಂಗವಾಗಿ ಕಲಘಟಗಿ ಮತಕ್ಷೇತ್ರದಲ್ಲಿ ವಿನೂತನವಾಗಿ ಆಚರಿಸಲಾಗುತ್ತಿದ್ದು,9 ಅಡಿ ಅಗಲ ಹಾಗೂ 2000 ಮೀಟರ್( 2 ಕಿಮೀ) ಉದ್ದದ ಬೃಹತ್ ರಾಷ್ಟ್ರ ಧ್ವಜದ ಮೆರವಣಿಗೆಯನ್ನು ಆಯೋಜಿಸಲಾಗಿದೆ.

ಅಗಸ್ಟ 15 ರಂದು ಕಲಘಟಗಿ ತಡಸ ಕ್ರಾಸ್ ‌ನಿಂದ ಕಲಘಟಗಿ ಪಟ್ಟಣದ ವರೆಗೆ ಧ್ವಜದ ಮೆರವಣಿಗೆ ಮಾಜಿ ಸಚಿವ ಸಂತೋಷ ಲಾಡ್ ಅವರು ನೇತ್ರತ್ವದಲ್ಲಿ ಜರುಗಲಿದೆ.

ವಿಶ್ವದಾಖಲೆ ನಿರ್ಮಿಸಬಹುದಾದಂತಹ ಧ್ವಜವಾಗಿದ್ದು,ಇಡೀ ವಿಶ್ವದಲ್ಲೇ ಇಂತಹ 9 ಅಡಿ ಅಗಲ ಹಾಗೂ 2 ಕಿಮೀ ಉದ್ದದ ಧ್ವಜ ಈ ವರಗೆ ಅನಾವರಣಗೊಳಿಸಿಲ್ಲ ಎನ್ನಲಾಗಿದೆ.ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.

Edited By : Manjunath H D
Kshetra Samachara

Kshetra Samachara

13/08/2021 09:31 pm

Cinque Terre

23.39 K

Cinque Terre

1

ಸಂಬಂಧಿತ ಸುದ್ದಿ