ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿಎಂ ಬೊಮ್ಮಾಯಿಯನ್ನು ಹಾಡಿ ಹೊಗಳಿದ ಶಾಸಕ ಬೆಲ್ಲದ

ಧಾರವಾಡ: ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನವೂ ಸಿಗದೇ ಇರುವುದರಿಂದ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ರಾಜಕೀಯ ಬೆಳವಣಿಗೆ ನಂತರ ಮೊದಲ ಬಾರಿಗೆ ಧಾರವಾಡಕ್ಕೆ ಆಗಮಿಸಿದ ಶಾಸಕ ಬೆಲ್ಲದ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರೊಬ್ಬ ಉತ್ತಮ ಆಡಳಿತಗಾರರು. ಹೆಚ್ಚು ಪುಸ್ತಕಗಳನ್ನು ಓದಿರುವವರ ಲಿಸ್ಟ್‌ನಲ್ಲಿ ಬೊಮ್ಮಾಯಿ ಕೂಡ ಒಬ್ಬರು. ಅವರೊಬ್ಬ ಮೇಧಾವಿ ರಾಜಕಾರಣಿ. ಆಡಳಿತ ಹಾಗೂ ರಾಜಕೀಯ ಅನುಭವ ಅವರಿಗೆ ಸಾಕಷ್ಟಿದೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಅವರಿಂದ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಲಿವೆ ಎಂದಿದ್ದಾರೆ.

ನಿಮಗೆ ಸಿಎಂ ಸ್ಥಾನವೂ ಸಿಗಲಿಲ್ಲ, ಸಚಿವ ಸ್ಥಾನವೂ ಸಿಗಲಿಲ್ಲವಲ್ಲ ಎಂಬ ಪ್ರಶ್ನೆಗೆ, ರಾಜಕೀಯದ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ ಎಂದರು.

ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಧಾರವಾಡಕ್ಕೆ ಬರುವ ದಿನ ನಾನು ಅವರೊಂದಿಗೆ ಮಾತನಾಡಿದ್ದೆ. ನಾನು ಊರಲ್ಲಿ ಇಲ್ಲ. ಬಂದ ನಂತರ ಭೇಟಿ ಮಾಡುವುದಾಗಿ ಹೇಳಿದ್ದೇನೆ ಎಂದರು.

ಬ್ಯಾನರ್‌ನಲ್ಲಿ ನನ್ನ ಫೋಟೋ ಹಾಕಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಹರಿದು ಹಾಕುವುದು ತಪ್ಪು. ಬ್ಯಾನರ್ ಹಾಕುವವರಿಗೂ ಗಮನ ಇರುವುದಿಲ್ಲ. ಒಮ್ಮೊಮ್ಮೆ ಆ ರೀತಿ ತಪ್ಪುಗಳಾಗುತ್ತಿರುತ್ತವೆ. ಆ ರೀತಿ ಬ್ಯಾನರ್ ಹರಿದ ಹಾಕುವುದು ತಪ್ಪು ಎಂದರು.

ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆ ಬಗ್ಗೆ ಡಿಪಿಆರ್ ರೆಡಿ ಆಗಿದೆ. ಡಿಪಿಆರ್ ರೆಡಿ ಆದ ನಂತರ ನಾನು ಸಭೆ ನಡೆಸಿಲ್ಲ. ಆ ಬಗ್ಗೆ ಸಭೆ ನಡೆಸಿ ಮಾಹಿತಿ ತಿಳಿದುಕೊಳ್ಳುತ್ತೇನೆ ಎಂದರು.

Edited By : Manjunath H D
Kshetra Samachara

Kshetra Samachara

10/08/2021 05:07 pm

Cinque Terre

32.58 K

Cinque Terre

4

ಸಂಬಂಧಿತ ಸುದ್ದಿ