ಹುಬ್ಬಳ್ಳಿ: ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಈಗಾಗಲೇ ಎರಡು ವಾರ ಕಳೆದಿವೆ. ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಆಯ್ತು ಆದರೆ ಬ್ಯಾನರ್‌ಗಳಲ್ಲಿ ಯಡಿಯೂರಪ್ಪನವರೇ ಇನ್ನೂ ಸಿಎಂ ಆಗಿ ಮುಂದುವರೆದಿದ್ದಾರೆ. ಅಲ್ಲದೇ ಸಚಿವ ಸಂಪುಟ ಸೇರಲ್ಲ ಎಂದು ಹೇಳಿದ್ದ ಶೆಟ್ಟರ್ ಸ್ವಗೃಹದಲ್ಲಿ ಜಗದೀಶ್ ಶೆಟ್ಟರ್ ಅವರು ಇನ್ನೂ ಕೂಡ ಮಿನಿಸ್ಟರ್ ಆಗಿಯೇ ಇದ್ದಾರೆ.
ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಬ್ಯಾನರ್‌ಗಳಲ್ಲಿ ಯಡಿಯೂರಪ್ಪನವರೇ ಇನ್ನೂ ಸಿಎಂ ಆಗಿ ರಾರಾಜಿಸುತ್ತಿದ್ದಾರೆ. ಹುಬ್ಬಳ್ಳಿಯ ತಹಶಿಲ್ದಾರ ಕಚೇರಿ ಸುತ್ತ ಹಾಕಿರುವ ಬ್ಯಾನರ್‌ಗಳು ಇವಾಗಿದ್ದು, ಇದರ ಜೊತೆಗೆ ಸರ್ಕಾರಿ ಬಸ್ ಗೆ ಅಂಟಿಸಿರೋ ಬ್ಯಾನರ್ ಗಳಲ್ಲಿ ಕೂಡ ಬಿಎಸ್ ವೈ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಮಂತ್ರಿ ಮಂಡಲವೂ ವಿಸ್ತರಣೆಯಾಗಿದೆ. ಆದರೂ ಬ್ಯಾನರ್‌ಗಳಲ್ಲಿ ಕರ್ನಾಟಕ ರಾಜ್ಯದ ಸಿಎಂ ಆಗಿ ಯಡಿಯೂರಪ್ಪನವರೇ ಮುಂದುವರೆದಿರುವುದು ವಿಪರ್ಯಾಸಕರ ಸಂಗತಿಯಾಗಿದೆ.
ಅಲ್ಲದೇ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸೇರುವುದಿಲ್ಲ ಎಂದು ಹೇಳಿಕೆ ನೀಡಿ ಎಲ್ಲರ ಚಿತ್ತ ತನ್ನತ್ತ ಸೆಳೆಯುವಂತೆ ಮಾಡಿದ್ದ ಜಗದೀಶ್ ಶೆಟ್ಟರ್ ಮನೆಯಲ್ಲಿ ಮಾತ್ರ ಇನ್ನೂ ಕೈಗಾರಿಕಾ ಸಚಿವರಾಗಿಯೇ ಉಳಿದಿದ್ದಾರೆ.
Kshetra Samachara
09/08/2021 01:42 pm