ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಚಿವರ ಬ್ಯಾನರ್‌ಗೆ ಕತ್ತರಿ

ಧಾರವಾಡ: ಸಚಿವರಾಗಿ ಮೊದಲ ಬಾರಿಗೆ ಧಾರವಾಡಕ್ಕೆ ಆಗಮಿಸಿದ ಶಂಕರ ಪಾಟೀಲ ಮುನೇನಕೊಪ್ಪ ಅವರ ಸ್ವಾಗತಕ್ಕಾಗಿ ಹಾಕಿದ ಬ್ಯಾನರ್‌ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಅರವಿಂದ ಬೆಲ್ಲದ ಅವರ ಭಾವಚಿತ್ರ ಕಾಣೆಯಾಗಿತ್ತು. ಇದರಿಂದ ಕಂಗಾಲಾದ ಕಿಡಿಗೇಡಿಗಳು ಆ ಬ್ಯಾನರ್‌ನ್ನೇ ಹರಿದು ಹಾಕಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ನೂತನ ಜಿಲ್ಲಾ ಉಸ್ತುವಾರಿ ಸಚಿವ ಮುನೇನಕೊಪ್ಪ ಅವರು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಅಲ್ಲಲ್ಲಿ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಬ್ಯಾನರ್ ಹಾಕಿದ್ದರು. ಬ್ಯಾನರ್​​ನಲ್ಲಿ ಶಾಸಕ ಬೆಲ್ಲದ ಭಾವಚಿತ್ರ ಹಾಕದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಟೋಲ್‌ ನಾಕಾದಲ್ಲಿ ಹಾಕಿದ್ದ ಬ್ಯಾನರ್‌ನ್ನು ಹರಿದು ಹಾಕಿದ್ದಾರೆ‌.

Edited By : Manjunath H D
Kshetra Samachara

Kshetra Samachara

07/08/2021 05:45 pm

Cinque Terre

62.76 K

Cinque Terre

9

ಸಂಬಂಧಿತ ಸುದ್ದಿ