ನವಲಗುಂದ : ತಾಲೂಕಿನ ಗುಮ್ಮಗೋಳ ಗ್ರಾಮದ ಮೂವರು ರೈತರು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲಾಗಿದ್ದು, ಅವರ ಪ್ರತಿ ಕುಟುಂಬಕ್ಕೆ 5 ಲಕ್ಷ ಪರಿಹಾರ ತಕ್ಷಣ ನೀಡಬೇಕೆಂದು ನವಲಗುಂದ ಮಾಜಿ ಶಾಸಕ ಎನ್ ಎಚ್ ಕೋನರಡ್ಡಿ ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಇತ್ತೀಚೆಗೆ ಅಲ್ಲಲ್ಲಿ ರೈತ ಆತ್ಮಹತ್ಯೆಗಳು ಮತ್ತೇ ಪ್ರಾರಂಭವಾಗಿದ್ದು, ರಾಷ್ಟ್ರೀಕೃತ ಬ್ಯಾಂಕಿನವರು ನೋಟಿಸ್ ನೀಡಿ ರೈತರ ಆತ್ಮಗೌವರಕ್ಕೆ ದಕ್ಕೇ ತರುವ ರೀತಿಯಲ್ಲಿ ಅವಮಾನಿಸುತ್ತಿದ್ದಾರೆ. ಇದರಿಂದ ರೈತರು ತಮ್ಮ ಸ್ವಾಭಿಮಾನಕ್ಕಾಗಿ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಬರಗಾಲ ನಂತರ ಕಳೆದ ಬಾರಿ ಅತೀವೃಷ್ಟಿ, ಈ ಬಾರಿ ಮತ್ತೇ ಅತೀ ಹೆಚ್ಚು ಮಳೆಯಾಗಿ ರೈತರು ಬೆಳೆದ ಬೆಳೆಗಳು ಹಾಳಾಗಿವೆ. ಇದರಿಂದ ನೊಂದ ರೈತರು ಇತ್ತ ಸಾಲ ತೀರಿಸಲು ಆಗದೇ ಬೆಳೆದ ಬೆಳೆಗಳು ನಾಶವಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಮೈಲಾರಪ್ಪ ರಾಯಪ್ಪ ನವಲೂರ, ಪ್ರಕಾಶ ಮಲ್ಲಿಕಾರ್ಜುನ ತೆಂಬದ ಹಾಗೂ ಮೈಲಾರಪ್ಪಾ ಯಲ್ಲಪ್ಪ ತೆಂಬದ ತಾಲೂಕಿನ ಮೊರಬ ವಿಜಯಾ ಬ್ಯಾಂಕಿನಲ್ಲಿ ಹಾಗೂ ನವಲಗುಂದದ ಸ್ಟೇಟ್ ಬ್ಯಾಂಕ್‍ಗಳಲ್ಲಿ ಬೆಳೆಸಾಲ ಪಡೆದಿದ್ದರು. ಕೂಡಲೇ ಇವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಮತ್ತು ಇವರ ಆತ್ಮಹತ್ಯೆ ಆಘಾತ ತಂದಿದೆ ಎಂದು ತಿಳಿಸಿದರು.
Kshetra Samachara
03/08/2021 02:35 pm