ಧಾರವಾಡ: ಹಾವೇರಿ ಶಾಸಕ ನೆಹರು ಓಲೇಕಾರ ಅವರಿಗೆ ಪ್ರಸಕ್ತ ವರ್ಷದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಉತ್ತರ ಕರ್ನಾಟಕ ಛಲವಾದಿ ಮಹಾಸಭಾದ ಕಾನೂನು ಸಲಹೆಗಾರ ಲಕ್ಷ್ಮಣ ಬಕ್ಕಾಯಿ ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಹರೂ ಓಲೇಕಾರ ಅವರು ಎಸ್‌ಸಿ ಹಾಗೂ ಎಸ್‌ಟಿ ಆಯೋಗದ ಎರಡು ಅವಧಿಗೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಾವೇರಿ ಜಿಲ್ಲೆಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾವೇರಿ ಜಿಲ್ಲೆಯ ಸರ್ವ ಜನಾಂಗದ ಜನಪ್ರಿಯತೆಯನ್ನು ಹೊಂದಿರುವ ಅವರು, ತಮ್ಮ ಕಾರ್ಯಶೈಲಿ ಹಾಗೂ ಜಾಣ್ಮೆಯಿಂದ ಇಡೀ ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಆಯೋಗದ ಸಾರಥ್ಯ ವಹಿಸುವುದರ ಮೂಲಕ ಜನಾನುರಾಗಿಯಾಗಿದ್ದಾರೆ.
ಗೋವಿಂದ ಕಾರಜೋಳ ಅವರು ಡಿಸಿಎಂ ಆಗಿದ್ದರು ಎನ್ನುವುದನ್ನು ಹೊರತುಪಡಿಸಿದರೆ ಅವರಿಂದ ಏನೂ ಕೆಲಸಗಳಾಗಿಲ್ಲ. ಇದನ್ನೆಲ್ಲ ನೋಡಿದರೆ ಓಲೇಕಾರ ಸಚಿವರಾಗಲು ಸಮರ್ಥ ವ್ಯಕ್ತಿ. ಆದ್ದರಿಂದ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.
Kshetra Samachara
02/08/2021 12:42 pm