ಕಲಘಟಗಿ: ಕ್ಷೇತ್ರದ ಅಳ್ನವಾರದ ಅತೀವೃಷ್ಟಿ ಪ್ರದೇಶಕ್ಕೆ ಭೇಟಿ ನೀಡಲು ಆಗಮಿಸಿದ ಮಾಜಿ ಸಚಿವ ಸಂತೋಷ್ ಲಾಡ್ ಗುರುವಾರ ಮಧ್ಯಾಹ್ನ ಸಮೀಪದ ಕಡಬಗಟ್ಟಿ ಕ್ರಾಸ್ ಬಳಿ ಇರುವ ಪೆಟ್ಟಿಗೆ ಅಂಗಡಿಗೆ ತೆರಳಿ ವಡಾಪಾವ ಸವಿದು ಸರಳತೆ ತೋರಿದರು.
ಮಾಜಿ ಸಚಿವರು ತಮ್ಮ ಅಂಗಡಿಗೆ ಬಂದ ಸಂತಸದಲ್ಲಿ ಯುವ ಮಾಲಿಕ ನಾಗರಾಜ ಹೊಸಮನಿ ನಗು ನಗುತ್ತಾ ಸಚಿವರಿಗೆ ಬಿಸಿ ಬಿಸಿ ತಿಂಡಿ ಹಾಗೂ ಚಹಾ ನೀಡಿ ಸಂಭ್ರಮಿಸಿದರು.
ದಿನವಿಡಿ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಭಾಗಿಯಾದ ಲಾಡ್ ವಡಾಪಾವ ಸವಿದು ಖುಷಿಪಟ್ಟರು.
ಅವರ ಜೊತೆ ಆಗಮಿಸಿದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೂಡಾ ವಡಾಪಾವ ತಿಂದು ಸಂತಸ ಪಟ್ಟರು.
Kshetra Samachara
30/07/2021 12:43 pm