ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯಾಕ್ರಿ ಬೊಮ್ಮಾಯಿ ಸಾಹೇಬ್ರ ಸಿಎಂ ಆದಮೇಲೆ ಸಿದ್ಧಾರೂಡರ ನೆನಪು ಆಗಿಲ್ವ...?

ಹುಬ್ಬಳ್ಳಿ: ಗದ್ದುಗೆಯ ಗುದ್ದಾಟದಲ್ಲಿ ಅಂತೂ ಇಂತೂ ನಮ್ಮ ಬಸವರಾಜ ಬೊಮ್ಮಾಯಿಯವರು ಏನೋ ಸಿಎಂ ಆಗಿ ಪ್ರಮಾಣ ವಚನ ಕೂಡ ಸ್ವೀಕಾರ ಮಾಡಿದರು. ಅಲ್ಲದೆ ರಾಜನಂತೆ ವಾಣಿಜ್ಯನಗರಿ ಹುಬ್ಬಳ್ಳಿಗೆ ಸ್ಟೈಲ್ ಆಗಿ ಎಂಟ್ರಿ ಕೂಡ ಕೊಟ್ರು ಆದರೆ ನಮ್ಮ ಸಿಎಂ ಸಾಹೇಬರು ಮಾತ್ರ ಎಲ್ಲೊ ಒಂದು ಯಡವಟ್ಟು ಮಾಡಿಕೊಂಡಿದ್ದಾರೆ.

ಅರೇ ಎಲ್ಲವೂ ಸರಿಯಾಗಿದೆ ಏನಿದು ಯಡವಟ್ಟು ಅಂತೀರಾ. ಹಾಗಿದ್ದರೇ ನೋಡ್ರಿ ಇಲ್ಲಿದೆ ಮಾಹಿತಿ. ಉತ್ತರ ಕರ್ನಾಟಕದ ಆರಾಧ್ಯದೈವ ಎಂದು ಕರೆಯಲಾಗುವ ಸಿದ್ಧಾರೂಡರ ಮಠಕ್ಕೆ ಹಾಗೂ ಮೂರುಸಾವಿರ ಮಠಕ್ಕೆ ದೇಶದ ವಿವಿಧ ಮೂಲೆಗಳಿಂದ ಜನರು ಹಾಗೂ ಜನಪ್ರತಿನಿಧಿಗಳು ಕೂಡ ಬರುತ್ತಾರೆ. ಅಲ್ಲದೇ ಪ್ರತಿ ಭಾರಿ ಹುಬ್ಬಳ್ಳಿಗೆ ಬಂದ ಪಿಎಂ ನರೇಂದ್ರ ಮೋದಿಯವರು ಕೂಡ ಕಷ್ಟಪಟ್ಟು ಕನ್ನಡದಲ್ಲಿ ಸಿದ್ಧಾರೂಡರ ಹೆಸರನ್ನು ಹೇಳಿ ನಮಸ್ಕಾರ ಸಲ್ಲಿಸುತ್ತಾರೆ. ಆದರೆ ನಮ್ಮ ಬೊಮ್ಮಾಯಿ ಸಾಹೇಬರು ಮಾತ್ರ ಸಿದ್ಧಾರೂಡರ ಮಠಕ್ಕೆ ಹಾಗೂ ಮೂರುಸಾವಿರ ಮಠಕ್ಕೆ ಭೇಟಿ ನೀಡದೇ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಕಾಯಕವೇ ಕೈಲಾಸ ಎನ್ನುವುದು ಬೊಮ್ಮಾಯಿಯವರು ಉದ್ದೇಶ ಏನೋ ನಿಜ ಆದರೆ ಸಿಎಂ ಆಗಿ ತವರಿಗೆ ಬಂದ ಸಿಎಂ ತವರಿನ ಆರಾಧ್ಯದೈವ ದರ್ಶನ ಪಡೆಯದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೊಮ್ಮಾಯಿ ಸಾಹೇಬರ ಸಾಧನೆಗೆ ಇಲ್ಲಿನ ಸಿದ್ಧಾರೂಡರ ಹಾಗೂ ಗುರುನಾಥರೂಢರ ಆಶೀರ್ವಾದವೇ ಕಾರಣ ಆದರೆ ಸಾಹೇಬರು ಮಾತ್ರ ಇಲ್ಲಿಗೆ ಭೇಟಿ ನೀಡದೇ ಇರುವುದು ಹುಬ್ಬಳ್ಳಿ ಜನರಿಗೆ ಒಂದು ತರಹದ ಬೇಸರ ಮೂಡಿಸಿದೆ.

Edited By : Nagesh Gaonkar
Kshetra Samachara

Kshetra Samachara

29/07/2021 09:17 pm

Cinque Terre

82.58 K

Cinque Terre

37

ಸಂಬಂಧಿತ ಸುದ್ದಿ