ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಕೆಶಿ ಹೆಸರಲ್ಲಿ ವಂಚನೆ: 'ಕೈ' ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಉಚ್ಚಾಟನೆ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಿಂದ ಪೂರ್ಣಿಮಾ ಸವದತ್ತಿ ಉಚ್ಚಾಟನೆ ಮಾಡಿ ಹುಬ್ಬಳ್ಳಿ-ಧಾರವಾಡ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಮ್ರಾನ್ ಎಲಿಗಾರ ಆದೇಶ ಹೊರಡಿಸಿದ್ದಾರೆ.

ಪೂರ್ಣಿಮಾ ಸವದತ್ತಿ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿ ಜನರಿಗೆ ವಂಚನೆ ಆರೋಪದ ಕೇಳಿ ಬಂದಿದೆ. ಡಿ.ಕೆ ಶಿವಕುಮಾರ್​ ಅವರ ಕಪ್ಪು ಹಣದಿಂದ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡುತ್ತೇನೆಂದು ಜನರಿಗೆ ನಂಬಿಸಿ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೂರ್ಣಿಮಾ ಸವದತ್ತಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎನ್ನಲಾಗಿದೆ.

ಪೂರ್ಣಿಮಾ ಕೇವಲ ಡಿಕೆಶಿ ಹೆಸರು ಮಾತ್ರವೇ ಅಲ್ಲದೆ ಶಾಸಕರಾದ ಪ್ರಕಾಶ್ ಅಬ್ಬಯ್ಯ ಹೆಸರು ಬಳಸಿ ಸಹ ವಂಚಿಸಿದ್ದರು ಎನ್ನಲಾಗಿದ್ದು "ನಾನು ಕೆಪಿಸಿಸಿ ಕಚೇರಿಯಿಂದ ಕರೆ ಮಾಡಿದ್ದೇನೆ, ನನಗೆ ಹತ್ತು ಸಾವಿರ ನೀಡಿದರೆ ಡಿಕೆಶಿ ಅವರ ಕಪ್ಪು ಹಣದಿಂದ ನಿಮಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತೇನೆ" ಎಂದು ಪೂರ್ಣಿಮಾ ಜನರಿಗೆ ನಂಬಿಸುತ್ತಿದ್ದರು ಎಂದು ತಿಳಿದುಬಂದಿದೆ.

Edited By : Vijay Kumar
Kshetra Samachara

Kshetra Samachara

28/02/2021 06:25 pm

Cinque Terre

14.17 K

Cinque Terre

3

ಸಂಬಂಧಿತ ಸುದ್ದಿ