ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೊದಲು ಇಂಧನ ಬೆಲೆ ಕಡಿಮೆ ಮಾಡ್ರಿ..ಜೀವನ ನಡೆಸುವುದು ಕಷ್ಟ ಆಗಿದೆ...!

ಹುಬ್ಬಳ್ಳಿ: ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಳಸಾ ಬಂಡೂರಿ ಹೋರಾಟಗಾರರು ಹಾಗೂ ಲಾರಿ ಮಾಲೀಕರ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ಕೆಲ ಸಮಯ ಹುಬ್ಬಳ್ಳಿಯ ಗಬ್ಬೂರ ಟೋಲ್ ಬಂದ್ ಮಾಡಿದ ಕಾರ್ಯಕರ್ತರು ಕೇಂದ್ರ ಸರ್ಕಾರ ಹಳೆ ಲಾರಿಗಳನ್ನು ಬಂದ್ ಮಾಡುವ ಕಾನೂನುನ್ನು ಹಿಂಪಡೆಯಬೇಕು. ಥರ್ಡ್ ಪಾರ್ಟಿ ಇನ್ಸೂರೆನ್ಸ್ ಕಮ್ಮಿ ಮಾಡಬೇಕು. ಇ.ವೇ ಬಿಲ್ ಹಿಂಪಡೆಯಬೇಕು ಟೋಲ್ ದರವನ್ನು ಕಮ್ಮಿ ಮಾಡಬೇಕು ಹಾಗೂ ಇತರೆ ಸಮಸ್ಯೆಗಳಾದ ಗ್ಯಾಸ್ ಡಿಜೈಲ್, ಪೆಟ್ರೋಲ್ ದರವನ್ನು ಜಿ ಎಸ್ ಟಿ ಯಲ್ಲಿ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Edited By : Manjunath H D
Kshetra Samachara

Kshetra Samachara

26/02/2021 07:19 pm

Cinque Terre

18.46 K

Cinque Terre

1

ಸಂಬಂಧಿತ ಸುದ್ದಿ