ಧಾರವಾಡ: ಬಿಜೆಪಿ ಧಾರವಾಡ ನಗರ ಯುವಮೋರ್ಚಾ ಘಟಕದ ವತಿಯಿಂದ ಪ್ರತಿ ಭಾನುವಾರ ಸ್ವಚ್ಛ ಸಂಡೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಂದು ಕೂಡ ಧಾರವಾಡದ ಶಿವಾಜಿ ಮೂರ್ತಿ ಸೇರಿದಂತೆ ಅದರ ಸುತ್ತಮುತ್ತಲ ಜಾಗವನ್ನು ಸ್ವಚ್ಛಗೊಳಿಸಲಾಯಿತು.
ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಕ್ತಿ ಹಿರೇಮಠ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವ ಧುರೀಣ ಸಂಕಲ್ಪ ಶೆಟ್ಟರ್ ಅವರು ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗವಹಿಸಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಸುನೀಲ ಮೋರೆ, ಕಿರಣ ಉಪ್ಪಾರ, ಶ್ರೀನಿವಾಸ ಕೋಟ್ಯಾನ, ಹರೀಶ ಬಿಜಾಪುರ, ಶಂಕರ ಶೆಳಕೆ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.
Kshetra Samachara
14/02/2021 11:54 am